ಚೆಟ್ಟಳ್ಳಿ, ಡಿ. 6 : ಕಾಫಿ ಬೆಳೆಗಾರರಿಗೆ ಬೇಕಾದ ಮಾಹಿತಿಯನ್ನು ಸಸ್ಯಮೂಲ ಸಂವರ್ಧನಾ ಕಾರ್ಯಾಗಾರದಲ್ಲಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ನಡೆಸಲಾಯಿತು. ವಿನೂತನ ಯೋಜನೆಯ ಮೂಲಕ ಬೇಸಾಯಕ್ರಮ, ಕೀಟ ಹಾಗೂ ರೋಗಬಾಧೆಯ ನಿಯಂತ್ರಣ, ಕಸಿಕಟ್ಟುವಿಕೆ ಹಾಗೂ ಉತ್ತಮ ತಳಿಯ ಗಿಡಗಳ ಚಿಗುರಿನಿಂದ ಗಿಡಗಳನ್ನು ಬೆಳೆಸುವ ಕ್ರಮದ ಬಗ್ಗೆ ತಿಳಿಸಲಾ ಯಿತು. ಉಪ ಸಂಶೋದನಾ ಕೇಂದ್ರದ ಉಪನಿರ್ದೇಶಕ ಡಾ. ಶಿವಪ್ರಸಾದ್ ಹಾಗೂ ತಜ್ಞ ಪ್ರಪುಲ್ಲಕುಮಾರಿ ಮಣ್ಣಿನ ಫಲವತ್ತತೆಯ ಬಗ್ಗೆ, ಬೇಸಾಯ ತಜ್ಞರಾದ ಗೋವಿಂದಪ್ಪ ತಿಳಿಸಿದರು. ಕೀಟ ಹಾಗೂ ರೋಗ ತಜ್ಞ ಡಾ.ಶಿವಲಿಂಗು ಹಾಗೂ ರಂಜಿತ್ ತಿಳಿಸಿದರು. ಕಿರಿಯ ಸಂಪರ್ಕಾಧಿಕಾರಿ ಮಿಥುನ್ ಹಾಜರಿದ್ದರು. ದಕ್ಷಿಣ ಕೊಡಗಿನ ವೀರಾಜಪೇಟೆ ತಾಲೂಕಿನ 30 ಬೆಳೆಗಾರರು ಕಾರ್ಯಾಗಾರಗಳ ಪ್ರಯೋಜನವನ್ನು ಪಡೆದರು.