ಮಡಿಕೇರಿ, ಡಿ. 6: ಗುಜರಾತ್‍ನಲ್ಲಿ ಫೆಬ್ರವರಿ 2020ಕ್ಕೆ ನಡೆಯುವ ರಾಷ್ಟ್ರೀಯ ಮಾಸ್ಟರ್ಸ್ ಟೇಬಲ್ ಟೆನ್ನಿಸ್ ತಂಡಕ್ಕೆ ಕರ್ಣಯ್ಯನ ಎ. ಈಶ್ವರ ಕರ್ನಾಟಕ ತಂಡಕ್ಕೆ ಆಯ್ಕೆಯಾಗಿದ್ದಾರೆ. ಇವರು ಅಥ್ಲೆಟಿಕ್ಸ್ ವಿಭಾಗದಲ್ಲಿ ಮಂಗಳೂರು ವಿಶ್ವವಿದ್ಯಾಲಯ, ಕರ್ನಾಟಕ ರಾಜ್ಯ ಮತ್ತು ಮಾಸ್ಟರ್ಸ್ ವಿಭಾಗದಲ್ಲಿ 800 ಮೀ., 1500 ಮೀ.ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಕಟ್ಟೆಮಾಡು ಗ್ರಾಮದ ಕರ್ಣಯ್ಯನ ನಂಜಮ್ಮ ಹಾಗೂ ದಿ. ಅಶೋಕ ಅವರ ಪುತ್ರ. ಇವರು ಪ್ರಸ್ತುತ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.