ಶ್ರೀಮಂಗಲ, ಡಿ. 5: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕಾಕೂರು ಗ್ರಾಮದಲ್ಲಿ ರೈತ ಮಹಿಳೆ ಶಿವಚಾರರ ನಳಿನಾಕ್ಷಿ ಎಂಬವರ ಹಸುವನ್ನು ಹುಲಿ ದಾಳಿ ಮಾಡಿ ಕೊಂದುಹಾಕಿದೆ.

ಬುಧವಾರ ಮಧ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದ್ದು, ಹಸುವನ್ನು ಮೇಯಲು ಗದ್ದೆಯಲ್ಲಿ ಕಟ್ಟಲಾಗಿತ್ತು. ಸಂಜೆ ವೇಳೆ ಹಸುವನ್ನು ಕೊಟ್ಟಿಗೆಯಲ್ಲಿ ಕಟ್ಟಲು ತೆರಳಿದ ಸಂದರ್ಭ ಹಸು ಸ್ಥಳದಲ್ಲಿ ಕಾಣೆಯಾಗಿದ್ದ ಹಿನ್ನೆಲೆಯಲ್ಲಿ ಹುಡುಕಾಡಿದಾಗ ಹುಲಿ ದಾಳಿ ನಡೆಸಿ ಕೊಂದಿರುವದು ಬೆಳಕಿಗೆ ಬಂದಿದೆ.

ಹಸುವಿನ ಕೆಲವು ಭಾಗವನ್ನು ಹುಲಿ ತಿಂದಿರುವದು ಗೋಚರಿಸಿದ್ದು, ಸ್ಥಳಕ್ಕೆ ರಾಜ್ಯರೈತ ಸಂಘದ ಪ್ರೊ.ನಂಜುಂಡಸ್ವಾಮಿ ಬಣದ ಜಿಲ್ಲಾ ಸಮಿತಿಯ ಕಾರ್ಯಕರ್ತರಾದ ಕಳ್ಳಿಚಂಡ ಧನು, ಬಾದುಮಂಡ ಮಹೇಶ್, ಕಟ್ಟೇರ ಪ್ರಕಾಶ್, ಕಟ್ಟೇರ ರಮೇಶ್, ಚಂಗುಲಂಡ ರಾಜಪ್ಪ, ಐಯ್ಯಮಾಡ ಹ್ಯಾರಿ, ಲೋಕೇಶ್ ಮುಂತಾದವರು ಭೇಟಿ ನೀಡಿ ಅರಣ್ಯಾಧಿಕಾರಿಗಳು ಕೂಡಲೇ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಹುಲಿಯನ್ನು ಕೂಡಲೇ ಅರಣ್ಯ ಇಲಾಖೆ ಸೆರೆಹಿಡಿಯಬೇಕೆಂದು ಆಗ್ರಹಿಸಿದರು.