ಮಡಿಕೇರಿ, ಡಿ. 5: ಮೂಲತಃ ಮಡಿಕೇರಿಯ ನಿವಾಸಿ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸೇವೆ-ಸಾಧನೆಯೊಂದಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದ ಕೋದಂಡ ಮುತ್ತಯ್ಯ (87) ಅವರು ತಾ. 5 ರಂದು ಬೆಂಗಳೂರಿನಲ್ಲಿ ನಿಧನರಾದರು.

ಕ್ರೀಡೆಯಲ್ಲಿ ಈ ಹಿಂದೆ ದೇಶವನ್ನು ಪ್ರತಿನಿಧಿಸಿರುವ ಇವರು ಹಲವು ಪದಕಗಳನ್ನು ಗಳಿಸಿದ್ದರಲ್ಲದೆ, ತರಬೇತುದಾರರೂ ಆಗಿದ್ದರು. ಕ್ರೀಡಾ ಕ್ಷೇತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಗಳಿಸಿದ ಕೊಡಗಿನ ಪ್ರಥಮ ವ್ಯಕ್ತಿ ಇವರಾಗಿದ್ದರು.