ಗೋಣಿಕೊಪ್ಪ ವರದಿ, ಡಿ. 5: ಇಲ್ಲಿನ ಬೈಪಾಸ್ ರಸ್ತೆಯಲ್ಲಿ ಗೋಣಿಕೊಪ್ಪ ಮರ್ಚೆಟ್ ಕೋಆಪರೇಟಿವ್ ಸೊಸೈಟಿ ವತಿಯಿಂದ ಇ-ಸ್ಟ್ಯಾಂಪಿಂಗ್ ಶಾಖೆಯನ್ನು ಆರಂಭಿಸಲಾಗಿದ್ದು, ಮರ್ಚೆಂಟ್ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಕಿರಿಯಮಾಡ ಅರುಣ್ ಪೂಣಚ್ಚ ಉದ್ಘಾಟಿಸಿದರು.

ನಂತರ ಮಾತನಾಡಿ, ಜನರಿಗೆ ಅನುಕೂಲವಾಗುವಂತೆ ಸೊಸೈಟಿ ವತಿಯಿಂದ ಇ-ಸ್ಟ್ಯಾಂಪಿಂಗ್ ವ್ಯವಸ್ಥೆಯನ್ನು ನೀಡಲಾಗಿದೆ. ಸಾರ್ವಜನಿಕರಿಗೆ ಇದರಿಂದ ಹೆಚ್ಚಿನ ಅನುಕೂಲವಾಗಲಿದ್ದು, ಸೊಸೈಟಿ ಅಭಿವೃದ್ಧಿಗೂ ಸಹಕಾರವಾಗಲಿದೆ ಎಂದರು. ವಕೀಲ ಕಾಶಿಯಪ್ಪ ಮಾತನಾಡಿ, ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ಸಾರ್ವಜನಿಕರಿಗೆ ಸೇವೆ ಲಭಿಸಿಲಿದೆ ಎಂದರು. ಈ ಸಂದರ್ಭ ಉಪಾಧ್ಯಕ್ಷ ಸುನಿಲ್ ಮಾದಪ್ಪ, ನಿರ್ದೇಶಕರಾದ ನಾಮೇರ ದೇವಯ್ಯ, ಸುಮಿ ಸುಬ್ಬಯ್ಯ, ಸಿಇಒ ಬಿ.ಇ. ಕಿರಣ್ ಇದ್ದರು.