ಗೋಣಿಕೊಪ್ಪಲು, ಡಿ. 5: ತಾ. 6 ರಂದು (ಇಂದು) ಬಾಬಾ ಸಾಹೇಬ್ ಅಂಬೇಡ್ಕರ್ ಪರಿ ನಿರ್ವಾಣ ಅಂಗವಾಗಿ ಸಂವಿಧಾನ ಜಾಗೃತಿ ಕುರಿತು ಉಪಾನ್ಯಾಸ ಕಾರ್ಯಕ್ರಮ ನವಯಾನ ಬುದ್ದ ಧಮ್ಮ ಒಕ್ಕೂಟದ ವತಿಯಿಂದ ನಾಗರಹೊಳೆ ನಾಣಚ್ಚಿ ಗದ್ದೆ ಹಾಡಿಯಲ್ಲಿ ಬೆಳಿಗ್ಗೆ 11 ಗಂಟೆಗೆ ನಡೆಯಲಿದೆ ಎಂದು ಅಮ್ಮಾಳೆ ಅಮ್ಮ ಕಲಾ ತಂಡದ ಮುಖಂಡ ಜೆ.ಬಿ. ರಮೇಶ್ ತಿಳಿಸಿದ್ದಾರೆ.

ಭಾರತೀಯ ಸಂವಿಧಾನ ಪ್ರಸರಣ ಒಕ್ಕೂಟದ ಭಿತ್ತಿಪತ್ರ, ಅಮ್ಮಾಳೆ ಅಮ್ಮ ಕಲಾ ತಂಡದ ಲಾಂಛನ ಬಿಡುಗಡೆ ನಡೆಯಲಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಿ. ಶ್ರೀಧರ್ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಚೆನ್ನೈನ ಬುದ್ದ ಮಹಾ ಉಪಾಸಕ ಪೂಜ್ಯ ಮನೋರಖ್ಖಿತ ಭಂತೇಜಿ, ಜೇತವನ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ನವಯಾನ ಬುದ್ದ ಧಮ್ಮ ಒಕ್ಕೂಟದ ಪ್ರಧಾನ ಸಂಚಾಲಕ ಬಿ.ಎಂ. ಲಿಂಗರಾಜು ವಹಿಸಲಿದ್ದಾರೆ.