ಚೆಟ್ಟಳ್ಳಿ, ಡಿ. 5: ಸಮೀಪದ ಪೊನ್ನತ್ಮೊಟ್ಟೆ ಮೌನತುಲ್ ಇಸ್ಲಾಮ್ ಮದರಸದಲ್ಲಿ ಸಮಸ್ತ ಕೇರಳ ಇಸ್ಲಾಮ್ ವಿದ್ಯಾಭ್ಯಾಸ ಬೋರ್ಡ್ ನಿರ್ದೇಶನ ಪ್ರಕಾರ, ಸಮಸ್ತದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಮದರಸಗಳಲ್ಲಿ “ರಬೀವುಲ್ ಆಖಿರ್” ಮೊದಲನೇ ಭಾನುವಾರ ಮರಣಹೊಂದಿದ ಸಮಸ್ತ ವಿದ್ವಾಂಸರು ಹಾಗೂ ಉಮಾರಗಳ ಹೆಸರಿನಲ್ಲಿ ಪ್ರಾರ್ಥನಾ ಸಂಗಮ ನಡೆಸಲು ಆದೇಶ ಬಂದ ಪ್ರಕಾರ ಆಡಳಿತ ಮಂಡಳಿಯ ಸದಸ್ಯ ಪಿ.ಕೆ. ಸತ್ತಾರ್ ಅಧ್ಯಕ್ಷತೆಯಲ್ಲಿ ಪ್ರಾರ್ಥನಾ ಸಂಗಮ ನಡೆಯಿತು.
ಸಮಸ್ತ ನಾಯಕರ ಅನುಸ್ಮರಣೆ ಹಾಗೂ ಜೀವನ ಶೈಲಿಯನ್ನು ಸದರ್ ಮುಹಲ್ಲಿಮ್ ಸಹದ್ ಫೈಝಿ ಚೋಕಂಡಳ್ಳಿ ಅನುಸ್ಮರಣಾ ಭಾಷಣದಲ್ಲಿ ವಿವರಿಸಿದರು. ಈ ಸಂದರ್ಭ ವೇದಿಕೆಯಲ್ಲಿ ಆಡಳಿತ ಮಂಡಳಿ ಕಾರ್ಯದರ್ಶಿ ವಿ.ಪಿ. ಮೊಹಿದ್ದೀನ್, ಕೆ.ಎ. ಅಶ್ರಫ್, ಸಿ.ಎಂ. ಮುಸ್ತಫಾ, ಮೊಯ್ದು ಸಖಾಫಿ, ಜಲಾಲ್ ಮೌಲವಿ ಇದ್ದರು.