ಸುಂಟಿಕೊಪ್ಪ, ಡಿ. 5: ಕೆದಕಲ್ ಗ್ರಾಮದ 7ನೇ ಮೈಲು ಮಹಾದೇವ ಈಶ್ವರ ದೇವಾಲಯದ ಮೂರ್ತಿಗೆ ಅಲ್ಲಿನ ನಿವಾಸಿಗಳಾದ ಪೊನ್ನು ಮತ್ತು ಕುಮಾರ ಕುಟುಂಬದವರು ಈಶ್ವರನ ಕವಚವನ್ನು ಕೊಡುಗೆಯಾಗಿ ನೀಡಿದ್ದಾರೆ.

ಸೋಮವಾರ ಸಂಜೆಯಿಂದ ಮಹಾದೇವ ಈಶ್ವರ ಸ್ವಾಮಿಗೆ ರುದ್ರಾಭಿಷೇಕ ಮಾಡಿದ ನಂತರ ಕವಚ ಧಾರಣೆಯ ವಿಶೇಷ ಪೂಜಾ ಕೈಂಕಾರ್ಯವು ಮುಖ್ಯ ಅರ್ಚಕ ಅವಿನಾಶ್ ಆರಾದ್ಯ ಅವರಿಂದ ನಡೆಯಿತು.

ಗ್ರಾಮದ ನೂರಾರು ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜೆ, ಅಲಂಕಾರ ಪೂಜೆ, ಪುಷ್ಪಲಂಕಾರ ಪೂಜೆ ನಡೆಯಿತು. ನಂತರ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ನೆರೆದಿದ್ದ ಭಕ್ತರಿಗೆ ಪೊನ್ನು ಮತ್ತು ಕುಮಾರ ಕುಟುಂಬದವರಿಂದ ಅನ್ನಸಂತರ್ಪಣೆ ಏರ್ಪಡಿಸಲಾಯಿತು.