ಗೋಣಿಕೊಪ್ಪಲು / ಶ್ರೀಮಂಗಲ, ಡಿ. 4: ದಕ್ಷಿಣ ಕೊಡಗಿನ ಕುಟ್ಟ ವ್ಯಾಪ್ತಿಯಲ್ಲಿ ಕಾರ್ಮಿಕನನ್ನು ಹಾಡಹಗಲೇ ಬಲಿಪಡೆದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ 5 ಸಾಕಾನೆಗಳ ನೆರವಿನಿಂದ ನಡೆಸಲಾದ ಕಾರ್ಯಾಚರಣೆಯಲ್ಲಿ ಬುಧವಾರ ಮಧ್ಯಾಹ್ನ ಸೆರೆಹಿಡಿಯಲಾಗಿದೆ.ಕಾಡಾನೆ ದಾಳಿಯಿಂದ ರೈತರ ಜೀವ ಹಾನಿ ಸೇರಿದಂತೆ ಬೆಳೆ ಹಾನಿ ಸಂಭವಿಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಪುಂಡಾನೆಯನ್ನು ಸೆರೆ ಹಿಡಿಯುವಲ್ಲಿ ಇದೀಗ ಯಶಸ್ವಿಯಾಗಿದ್ದು ಶ್ರೀಮಂಗಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಕಾಫಿ ಬೆಳೆಗಾರ ತೀತಿರ ದೀಪಕ್ ಅವರ ಕಾಫಿ ತೋಟದಲ್ಲಿ ಅಡಗಿದ್ದ ಒಂಟಿ ಸಲಗವೊಂದನ್ನು ಸೆರೆ ಹಿಡಿದು ಸಿದ್ದಾಪುರ ಸಮೀಪದ ದುಬಾರೆ ಆನೆ ಶಿಬಿರಕ್ಕೆ ರವಾನಿಸಲಾಗಿದೆ.ಕುಟ್ಟ ಸಮೀಪ ಶ್ರೀಮಂಗಲ ಗ್ರಾ.ಪಂ. ವ್ಯಾಪಿ(ಮೊದಲ ಪುಟದಿಂದ) ಒಂದರಲ್ಲಿ ಹಿಂಡು ಕಾಡಾನೆ ಗಳೊಂದಿಗೆ ಇದ್ದ ಈ ಸಲಗವನ್ನು ಸೆರೆಹಿಡಿಯ ಲಾಯಿತು. ನವೆÀಂಬರ್ 21 ರಂದು ಕುಟ್ಟ ಸಮೀಪ ತೋಟ ಕಾರ್ಮಿಕನನ್ನು ಮಧ್ಯಾಹ್ನ 02:00 ಗಂಟೆ ವೇಳೆಯಲ್ಲಿ ದಿಢೀರಾಗಿ ದಾಳಿ ನಡೆಸಿ ಕಾಡಾನೆ ಬಲಿ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ನರ ಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ನವೆಂಬರ್ 24 ರಿಂದ ಕಾರ್ಯಾಚರಣೆ ನಡೆಸಿತ್ತು. ಮೊದಲ ಹಂತದ ಎರಡು ದಿನದ ಈ ಕಾರ್ಯಾಚರಣೆಯಲ್ಲಿ ಮತ್ತಿಗೋಡು ಸಾಕಾನೆ ಶಿಬಿರದಿಂದ ಅಭಿಮನ್ಯು ಮತ್ತು ಗೋಪಾಲಸ್ವಾಮಿ ಎಂಬ ಎರಡು ಸಾಕಾನೆಗಳನ್ನು ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳ ಲಾಗಿತ್ತು. ಈ ಸಂದರ್ಭ ಹಿಂಡು ಕಾಡಾನೆಗಳಲ್ಲಿ ನರ ಹಂತಕ ಕಾಡಾನೆಯನ್ನು ಗುರುತಿಸಿ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶ ಕಂಡಿರಲಿಲ್ಲ. ಎರಡನೇ ಹಂತದ ಕಾರ್ಯಾಚರಣೆಯನ್ನು ಕಳೆದ 4 ದಿನದಿಂದ 5 ಸಾಕಾನೆಗಳ ನೆರವಿನಿಂದ ಮತ್ತೆ ಅರಣ್ಯ ಇಲಾಖೆ ಆರಂಭಿಸಿತು.
ಕಳೆದ 15 ದಿನಗಳ ಹಿಂದೆ ಕುಟ್ಟ ಪಟ್ಟಣದಲ್ಲಿ ಕೂಲಿ ಕಾರ್ಮಿಕ ಕರಿಯ ಕಾಡಾನೆ ದಾಳಿಯಿಂದ ಮೃತಪಟ್ಟ ಹಿನೆÀ್ನಲೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ಮುಂದಾಳತ್ವದಲ್ಲಿ ಬೃಹತ್ ಪ್ರತಿಭಟನೆ ್ತಯ ಕಾಯಿಮನೆ ಯಲ್ಲಿ ಕಾಫಿ ತೋಟ ನಡೆಸಿ ತೋಟದಲ್ಲಿ ಅಡಗಿರುವ ಪುಂಡಾನೆಯನ್ನು ಸೆರೆಹಿಡಿಯ ಬೇಕೆಂದು ಒತ್ತಾಯಿಸಿದ್ದರು.
ರೈತರ ಒತ್ತಡದ ಮೇರೆ ಅರಣ್ಯ ಇಲಾಖಾ ಅಧಿಕಾರಿಗಳು ಒಂಟಿ ಸಲಗವನ್ನು ಸೆರೆ ಹಿಡಿಯಲು ಹಿರಿಯ ಅಧಿಕಾರಿಗಳ ಅನುಮತಿ ಪಡೆದಿದ್ದರು. ಮೇಲಾಧಿಕಾರಿಗಳ ಆದೇಶ ಬರುತ್ತಿದ್ದಂತೆ ಕಾಡಾನೆ ಹಿಡಿಯಲು ಕಾರ್ಯಾಚರಣೆಯನ್ನು ಮುಂದುವರೆಸಿದ ಶ್ರೀಮಂಗಲ ಎಸಿಎಫ್ ದಯಾನಂದ್ ಆರ್‍ಎಫ್‍ಒ ವೀರೇಂದ್ರ ತಮ್ಮ ಸಿಬ್ಬಂದಿಗಳ ಸಹಕಾರ ಪಡೆದು ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ 13 ಕಾಡಾನೆಗಳನ್ನು ಎರಡು ಗುಂಪುಗಳಾಗಿ ಬೇರ್ಪಡಿಸಿ ಕಾರ್ಯಾಚರಣೆ ಆರಂಭಿಸಿದ್ದರು. ಕಳೆದ 10 ದಿನಗಳಿಂದ ಈ ಒಂಟಿ ಸಲಗವನ್ನು ಸೆರೆ ಹಿಡಿಯಲು ಅಧಿಕಾರಿಗಳು ಶ್ರಮಪಟ್ಟಿದ್ದರು. ಬುಧವಾರ 7ಕಾಡಾನೆಯ ಗುಂಪಿನಲ್ಲಿ ಈ ಒಂಟಿ ಆನೆಯು ಗೋಚರಿಸಿದ ನಂತರ ಇದನ್ನು ಬೇರ್ಪಡಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾಗಿದ್ದರು.
ಒಂಟಿ ಆನೆಯು ಗುಂಪಿನಿಂದ ಬೇರ್ಪಡುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಅರವಳಿಕೆ ತಜ್ಞರಾದ ಅಕ್ರಂರವರು ಮಧ್ಯಾಹ್ನ 12.35ಕ್ಕೆ ಈ ಒಂಟಿ ಆನೆಯ ಮೇಲೆ ಅರವಳಿಕೆ ಪ್ರಯೋಗಿಸಿದರು. ಕಾಡಾನೆ ಪ್ರಜ್ಞೆ ತಪ್ಪಿ ನೆಲಕ್ಕುರುಳುತ್ತಿದ್ದಂತೆ ಸ್ಥಳದಲ್ಲೇ ಮೊಖ್ಖಾಂ ಹೂಡಿದ್ದ ತಿತಿಮತಿ ಸಮೀಪದ ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಸಾಕಾನೆಗಳಾದ ಅಭಿಮನ್ಯು, ಗಣೇಶ್, ಗೋಪಾಲಸ್ವಾಮಿ, ಕೃಷ್ಣ ಹಾಗೂ ಬಲರಾಮ, ಈ ಒಂಟಿ ಆನೆಯನ್ನು ಸುತ್ತುವರೆದು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಅಭಿಮನ್ಯುವಿನ ಮಾವುತ ವಸಂತ್ ನೇತೃತ್ವದಲ್ಲಿ ಮಾವುತರಾದ ಜೈಬಾಲು, ಸುಜನ್, ಗುಂಡು ಹಾಗೂ ತಿಮ್ಮ ಕಾರ್ಯಾ ಚರಣೆಯಲ್ಲಿ ಭಾಗವಹಿಸಿದ್ದರು.
ಕಳೆದ ಆರು ತಿಂಗಳ ಹಿಂದೆ ಬೀರುಗ ಗ್ರಾಮದ ಚೋಕಿರ ಸುಧಾ ಎಂಬವರನ್ನು ಬಲಿ ತೆಗೆದುಕೊಂಡ ಈ ಕಾಡಾನೆಗೆ 25 ವರ್ಷ ಪ್ರಾಯವಾಗಿದೆ. ಒಂಟಿ ಸಲಗವನ್ನು ಸೆರೆ ಹಿಡಿಯುವ ಮುನ್ಸೂಚನೆ ತಿಳಿಯುತ್ತಿದ್ದಂತೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ರೈತ ಮುಖಂಡರಾದ ಆಲೆಮಾಡ ಮಂಜುನಾಥ್, ಚಂಗುಲಂಡ ಸೂರಜ್, ಅಜ್ಜಮಾಡ ದರ್ಶನ್, ಕಿರಣ್, ಹರೀಶ್, ಶರೀನ್, ತೀತಿರ ಕಬೀರ್,
ಕಾರ್ಯಾಚರಣೆಯಲ್ಲಿ ಪಶು ವೈದ್ಯಾಧಿಕಾರಿಗಳಾದ ಡಾ.ನಾಗರಾಜ್, ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ಹರೀಶ್, ಮಲ್ಲಣ್ಣಗೌಡ, ಗಣೇಶ್ ಮುಂತಾದವರು ಭಾಗವಹಿಸಿದ್ದರು. ಪುಂಡಾನೆ ಸೆರೆಯಾಗುತ್ತಿದ್ದಂತೆಯೆ ಸುತ್ತ ಮುತ್ತಲಿನ ಗ್ರಾಮಸ್ಥರು ಕುರ್ಚಿ ಗ್ರಾಮಕ್ಕೆ ತೆರಳಿ ಸೆರೆಯಾದ ಪುಂಡಾನೆಯನ್ನು ವೀಕ್ಷಿಸಿದರು, ಅಭಿಮನ್ಯುವಿನ ಸಹಕಾರದಿಂದ ಪುಂಡಾನೆಯನ್ನು ಸಂಜೆಯ ವೇಳೆಯಲ್ಲಿ ದುಬಾರೆ ಆನೆ ಶಿಬಿರಕ್ಕೆ ವಾಹನದ ಮೂಲಕ ಸಾಗಿಸಲಾಯಿತು.
ಉಳಿದ ಎರಡು ಒಂಟಿ ಸಲಗ
ಈ ಭಾಗದಲ್ಲಿ ಹೆಚ್ಚಾಗಿ ಕಾಡಾನೆಗಳು ಕಾಣಿಸಿಕೊಂಡಿದ್ದು ಇನ್ನು ಎರಡು ಒಂಟಿ ಸಲಗಗಳು ರೈತರಿಗೆ ತೊಂದರೆ ನೀಡುತ್ತಿದೆ. ಈಗಾಗಲೇ ಒಂದು ಕಾಡಾನೆ ಸೆರೆ ಹಿಡಿಯಲು ಇಲಾಖೆ ಅನುಮತಿ ನೀಡಿದ್ದು ಇನ್ನು ಉಳಿದ ಎರಡು ಒಂಟಿ ಸಲಗವನ್ನು ಸೆರೆ ಹಿಡಿಯಲು ರೈತ ಸಂಘದಿಂದ ಒತ್ತಾಯ ಮಾಡಲಾಗುವದು. ಅರಣ್ಯ ಅಧಿಕಾರಿ ಹಾಗೂ ಸಿಬ್ಬಂದಿಗಳು ಸತತ ಪ್ರಯತ್ನದಿಂದ ಒಂಟಿ ಸಲಗವನ್ನು ಸೆರೆ ಹಿಡಿಂiÀiಲಾಗಿದೆ ಎಂದು ರೈತ ಸಂಘದ ಮುಖಂಡ ಅಜ್ಜಮಾಡ ಟಿ.ಚಂಗಪ್ಪ ತಿಳಿಸಿದ್ದಾರೆ.
ಸತತ ಪ್ರಯತ್ನ
ದುಬಾರೆ ಆನೆ ಶಿಬಿರಕ್ಕೆ... ಕಳೆದ 10 ದಿನಗಳಿಂದ ಸಿಬ್ಬಂದಿಗಳು ಹಾಗೂ ಅರವಳಿಕೆ ತಜ್ಞರು ಗುಂಪಿನಲ್ಲಿದ್ದ ಒಂಟಿ ಆನೆಯನ್ನು ಬೇರ್ಪಡಿಸುವಲ್ಲಿ ಸತತ ಪ್ರಯತ್ನ ನಡೆಸಿದ್ದರು. ಆದರೆ ಯಶಸ್ವಿಯಾಗಿರಲಿಲ್ಲ. ಸಂಜೆಯ ವೇಳೆಯಲ್ಲಿ ಒಂಟಿ ಸಲಗ ಬೇರ್ಪಟ್ಟರು ಅರವಳಿಕೆ ನೀಡಲು ಸಾಧ್ಯವಾಗುತ್ತಿರಲಿಲ್ಲ, ಗುಂಪಿನಿಂದ ಒಂಟಿ ಸಲಗವನ್ನು ಬೇರ್ಪಡಿಸಲೇಬೇಕೆಂದು ಕಾರ್ಯಾಚರಣೆಗಿಳಿದ ತಂಡಕ್ಕೆ ಮಧ್ಯಾಹ್ನದ ವೇಳೆ ಗುಂಪಿನಿಂದ ಬೇರ್ಪಡುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿ ಒಂಟಿ ಸಲಗವನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದೇವೆ. ಈ ಆನೆಯನ್ನು ದುಬಾರೆ ಆನೆ ಶಿಬಿರಕ್ಕೆ ಕರೆದೊಯ್ಯಲಾಗುವದು ಎಂದು ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ಮರಿಬಸಣ್ಣವರ್ ತಿಳಿಸಿದ್ದಾರೆ.