ಶನಿವಾರಸಂತೆ, ಡಿ. 4: ಮಹಾ ಮಾನವತಾವಾದಿ ಡಾ. ಅಂಬೇಡ್ಕರ್ ಅವರ 63ನೇ ಪರಿ ನಿರ್ವಾಣ ಕಾರ್ಯಕ್ರಮ ತಾ. 6 ರಂದು ಬೆಳಿಗ್ಗೆ ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ 10.30 ಗಂಟೆಗೆ ನಡೆಯಲಿದೆ.

ಮಧ್ಯಾಹ್ನ 12 ಗಂಟೆಗೆ ಸುಳುಗಳಲೆ ಗ್ರಾಮದ ಸಮುದಾಯ ಭವನದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಪರಿ ನಿರ್ವಾಣ ಕಾರ್ಯಕ್ರಮಕ್ಕೆ ಪರಿಶಿಷ್ಟ ಮುಖಂಡರುಗಳು ಆಗಮಿಸಲಿರುವರು ಎಂದು ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳಾದ ಜೆ.ಆರ್. ಪಾಲಾಕ್ಷ, ಶಿವಶಂಕರ್, ಎಸ್.ಜೆ. ರಾಜಪ್ಪ ಇತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.