ಕೂಡಿಗೆ, ಡಿ. 5: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕ ಅಳುವಾರ ಕನಕ ಯುವಕ ಸಂಘದ ವತಿಯಿಂದ ಅಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನದ ಮೂಲಕ ಶಾಲೆಯ ಆವರಣವನ್ನು ಸ್ವಚ್ಛತೆಗೊಳಿಸಲಾಯಿತು.
ಈ ಶಾಲೆಯ ಆವರಣದಲ್ಲಿ ಒಂದು ಎಕರೆಗಳಷ್ಟು ವಿಸ್ತೀರ್ಣವಿದ್ದು, ಆ ಜಾಗವು ಗಿಡಗಂಟೆಗಳು ಬೆಳದು ಕಾಡುಮಯವಾಗಿತ್ತು. ಇದನ್ನು ಅರಿತ ಕನಕ ಯುವಕ ಸಂಘದವರು ಶ್ರಮದಾನ ಮಾಡುವ ಮುಖೇನ ಒಂದು ಎಕರೆ ಪ್ರದೇಶವನ್ನು ಸ್ವಚ್ಛತೆಗೊಳಿಸಿದರು. ಅಲ್ಲದೆ ಶಾಲೆಯ ಹಿಂಭಾಗದ ಜಾಗಕ್ಕೆ ಬೇಲಿ ನಿರ್ಮಾಣ ಕಾರ್ಯದಲ್ಲಿ ತೊಡಗಿದರು. ಶಾಲಾ ಆವರಣದಲ್ಲಿ ವಿವಿಧ ಬಗೆಯ ಗಿಡಗಳನ್ನು ನೆಡÀಲಾಯಿತು.
ಈ ಸಂದರ್ಭದಲ್ಲಿ ಕನಕ ಯುವಕ ಸಂಘದ ಅಧ್ಯಕ್ಷ ಟಿ.ಕೆ. ಕುಮಾರ್ ಕಾರ್ಯದರ್ಶಿ ಎ.ಪಿ. ಧರ್ಮ, ಗೌರವ ಅಧ್ಯಕ್ಷ ಉದಯಕುಮಾರ್ ಸಂಘದ ನಿರ್ದೆಶಕರಾದ ನಂಜಪ್ಪ ಹೆಚ್.ಆರ್. ಕಾಳಪ್ಪ, ಮೋಹನ್, ಮಂಜುನಾಥ, ರಾಜು ವಿಜಯಕುಮಾರ್ ಹಾಗೂ ಗ್ರಾಮದ ಪ್ರಮುಖ ಟಿ.ಟಿ. ರಾಜು, ಗ್ರಾಮ ಪಂಚಾಯತಿ ಸದಸ್ಯೆ ರೂಪ ಹರೀಶ್, ಶಾಲಾ ಮುಖ್ಯ ಶಿಕ್ಷಕಿ ಸುರೇಖಬಾಯಿ, ಸಹ ಶಿಕ್ಷಕ ಪ್ರಸನ್ನ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.