ಮಡಿಕೇರಿ, ಡಿ. 4: ವೀರಾಜಪೇಟೆ ಬ್ಲಾಕ್ ಕಿಸಾನ್ ಘಟಕದ ಸಂಘಟನೆ ಮತ್ತು ಪದಾಧಿಕಾರಿಗಳ ನೇಮಕ ಹಾಗೂ ಅತಿವೃಷ್ಟಿಯಿಂದ ರೈತ ಬೆಳೆಗಾರರಿಗೆ ನಷ್ಟ ಪರಿಹಾರದ ವಿಚಾರವಾಗಿ ಚರ್ಚಿಸುವ ಸಲುವಾಗಿ ತಾ.7ರಂದು ಬೆಳಿಗ್ಗೆ 10.30 ಗಂಟೆಗೆ ವೀರಾಜಪೇಟೆ ಪುರಭವನದ ಕಟ್ಟಡದಲ್ಲಿ ಬ್ಲಾಕ್ ಅಧ್ಯಕ್ಷ ಗೋಪಾಲ್ ಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಸಭೆಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ನೆರವಂಡ ಉಮೇಶ್, ವೀರಾಜಪೇಟೆ ಬ್ಲಾಕ್ ಅಧ್ಯಕ್ಷ ಅಬ್ದುಲ್ ಸಲಾಂ ಆಗಮಿಸುವರು ಎಂದು ಕಿಸಾನ್ ಘಟಕದ ಕಾರ್ಯದರ್ಶಿ ಹೆಚ್.ಪಿ. ರಾಮದಾಸ್ ತಿಳಿಸಿದ್ದಾರೆ.