ಸೋಮವಾರಪೇಟೆ ಸಮೀಪದ ಶುಂಠಿ ಗ್ರಾಮ ನಿವಾಸಿ ದಿ.ಬೆಳ್ಳಿಗೌಡ್ರು ಅವರ ಪತ್ನಿ ಗೌರಮ್ಮ (81) ಅವರು ತಾ. 4 ರಂದು ನಿಧನರಾದರು. ಮೃತರು ಗೌಡಳ್ಳಿ ವಿಎಸ್‍ಎಸ್‍ಎನ್ ಅಧ್ಯಕ್ಷ ಎಸ್.ಬಿ. ಭರತ್ ಕುಮಾರ್ ಸೇರಿದಂತೆ ಮೂವರು ಪುತ್ರರು, ನಾಲ್ವರು ಪುತ್ರಿಯರನ್ನು ಅಗಲಿದ್ದು, ಅಂತ್ಯಕ್ರಿಯೆ ತಾ.5ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ.

*ಗುಡ್ಡೆಹೊಸೂರು ಬಸವನಹಳ್ಳಿ ಗ್ರಾಮ ನಿವಾಸಿ ದಿ. ತೋತ್ತೆರ ಬೆಳ್ಯಪ್ಪನವರ ಪತ್ನಿ ಪೂವಮ್ಮ (86) ತಾ. 4ರಂದು ನಿಧನರಾದು. ಮೃತರು ಮೂವರು ಪುತ್ರರನ್ನು ಮತ್ತು ಓರ್ವ ಪುತ್ರಿಯನ್ನು ಆಗಲಿದ್ದಾರೆ. ಅಂತ್ಯಕ್ರಿಯೆ ತಾ. 5ರಂದು (ಇಂದು) ಸ್ವಗ್ರಾಮದಲ್ಲಿನಡೆಯಲಿದೆ.

*ಮರಗೋಡು ಹೊಸ್ಕೇರಿ ಗ್ರಾಮ ನಿವಾಸಿ ಬಲ್ಲಚಂಡ ದಿಲೀಪ್ ಗಣಪತಿ (55) ತಾ. 4ರಂದು ನಿಧನರಾದರು. ಅಂತ್ಯಕ್ರಿಯೆ ತಾ. 5ರಂದು (ಇಂದು) ಬೆಳಿಗ್ಗೆ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

*ಪಾಲೂರು ಗ್ರಾಮದ ಬೈತಡ್ಕ ದಿ. ರಾಮಪ್ಪ ಅವರ ಪತ್ನಿ ಬೊಳ್ಳಮ್ಮ (95) ಅವರು ತಾ. 3 ರಂದು ನಿಧನರಾದರು. ಮೃತರು ಐವರು ಪುತ್ರರು, ಮೂವರು ಪುತ್ರಿಯರನ್ನು ಅಗಲಿದ್ದಾರೆ.

*ಮಕ್ಕಂದೂರು ಗ್ರಾಮ ನಿವಾಸಿ ತೂಟೇರ ಗಣಪತಿ (ಗಣೇಶ-67) ಅವರು ತಾ. 4 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 5 ರಂದು (ಇಂದು) ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಪತ್ನಿ, ಓವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.