ಶನಿವಾರಸಂತೆ, ಡಿ. 5: ಪಟ್ಟಣದ ಗುಂಡೂರಾವ್ ಬಡಾವಣೆಯಲ್ಲಿ ಕೂಲಿ ಕಾರ್ಮಿಕ ಮಹಿಳೆ ಪಂಕಜಾ ಅವರ ಮನೆಯ ಕೊಠಡಿಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ದಾಖಲಾತಿಗಳೊಂದಿಗೆ, ಹಣ, ಒಡವೆ, ಬಟ್ಟೆ ಸೇರಿದಂತೆ ಒಟ್ಟು ರೂ. 60 ಸಾವಿರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.

ಬಡಾವಣೆಯ ಸುಂದರಮ್ಮ ಅವರ ಹೆಸರಿನಲ್ಲಿರುವ ಮನೆಯಲ್ಲಿ ಪಂಕಜಾ-ಪಾಲಾಕ್ಷ ಅವರ ಕುಟುಂಬ ವಾಸವಿದ್ದು, ಪಂಕಜಾ ವಿಘ್ನೇಶ್ವರ ವಿದ್ಯಾಸಂಸ್ಥೆಯಲ್ಲಿ ಅಡುಗೆ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಈ ಘಟನೆ ನಡೆದಿದೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.