ಗೋಣಿಕೊಪ್ಪ ವರದಿ, ಡಿ. 5: ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋತೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿಯ ರೂಪಾಯಿ 21 ಲಕ್ಷ ಅನುದಾನದ ಮೂರು ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ಬಾನಂಡ ಪ್ರಥ್ಯು ಭೂಮಿಪೂಜೆ ನೆರವೇರಿಸಿದರು.

ರೂ. 18 ಲಕ್ಷ ಯೋಜನೆಯ ಸಾರ್ವಜನಿಕ ಕುಡಿಯುವ ನೀರು ಯೋಜನೆಯಡಿ ಒವರ್‍ಹೆಡ್ ಟ್ಯಾಂಕ್, ಪೈಪ್‍ಲೈನ್, ಮೀಟರ್ ಅಳವಡಿಕೆ ಕಾಮಗಾರಿ, 2 ಲಕ್ಷ ಅನುದಾನದಲ್ಲಿ ಕೋತೂರು ಮಹಾಲಿಂಗೇಶ್ವರ ದೇವಸ್ಥಾನ ರಸ್ತೆ ಅಭಿವೃದ್ಧಿ, ರೂ. 1 ಲಕ್ಷ ಅನುದಾನದಲ್ಲಿ ಮಾರಿಯಮ್ಮ ದೇವಸ್ಥಾನ ರಸ್ತೆ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಕಾನೂರು ಗ್ರಾ.ಪಂ. ಅಧ್ಯಕ್ಷೆ ಲತಾ ಕುಮಾರಿ, ಸದಸ್ಯರಾದ ಸಿದ್ದು ನಾಚಪ್ಪ, ಬೋಪಣ್ಣ, ಮಾಜಿ ಅಧ್ಯಕ್ಷ ಕುಂಞÂಮಾಡ ರಮೇಶ್, ಪಿಡಿಒ ಸತೀಶ್, ಗ್ರಾಮದ ಪ್ರಮುಖರಾದ ಕೆ.ಜೆ. ರಾಕೇಶ್, ಮನ್ನಕಮ್ಮನೆ ಈಶ್ವರಾ, ಅಪ್ಪಣ್ಣಮಯ್ಯ, ಬಾಲಕೃಷ್ಣ, ವಿನಯ್, ರವಿ ಇದ್ದರು.