ಕೂಡಿಗೆ, ಡಿ. 5: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡಲಸಂಗಮ ರಸ್ತೆಯನ್ನು ಸರ್ವೆ ಮಾಡಿಸುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.
ಕೂಡಿಗೆ ಗ್ರಾಮದ 1ನೇ ವಾರ್ಡ್ನ ಕೂಡಲಸಂಗಮ ರಸ್ತೆಯ ಅಕ್ಕ ಪಕ್ಕದಲ್ಲಿ ಜಮೀನು ಇದ್ದು, ರಸ್ತೆಯ ಜಾಗವು ಒತ್ತುವರಿಯಾಗಿದೆ. ಆದ್ದರಿಂದ ಸಂಬಂಧಿಸಿದ ಇಲಾಖೆಯವರು ಸರ್ವೆ ಮಾಡಿ ಹದ್ದು-ಬಸ್ತು ಗುರುತಿಸಬೇಕೆಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.