ಮಡಿಕೇರಿ, ಡಿ. 4: ಅಕ್ರಮವಾಗಿ ಹಲಸು ಹಾಗೂ ಹೆಬ್ಬಲಸು ಮರಗಳನ್ನು ಸಾಗಿಸುತ್ತಿದ್ದ ವಾಹನ (ಕೆಎ 12 ಬಿ 7622)ನ್ನು ಪತ್ತೆ ಹಚ್ಚಿದ ಸಂಪಾಜೆ ಅರಣ್ಯ ತನಿಖಾ ಠಾಣೆ ಪೊಲೀಸರು 2,50,000 ರೂ. ಮೌಲ್ಯದ ಮರಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳಾದ ನಾಪೋಕ್ಲುವಿನ ಹನೀಫ್, ಪಾಲಿಬೆಟ್ಟದ ಪಿ.ಕೆ. ಮಜೀದ್, ವೀರಾಜಪೇಟೆ ಕಲ್ಲುಬಾಣೆಯ ಕೆ.ಕೆ. ಮಜೀದ್ ಎಂಬವರುಗಳನ್ನು ಬಂಧಿಸಿದ್ದಾರೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನಿಲೇಶ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ಸಂಪಾಜೆ ವಲಯ ಅರಣ್ಯಾಧಿಕಾರಿ ಮಧುಸೂಧನ್ ನೇತೃತ್ವದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ವಿನಯಕೃಷ್ಣ, ರಾಘವ, ವಿಜೇಂದ್ರಕುಮಾರ್, ಬಸವರಾಜಪ್ಪ, ಅರಣ್ಯ ರಕ್ಷಕರಾದ ಕೆ.ಪಿ. ಜೋಯಪ್ಪ, ಪಿ.ಆರ್. ಜಗನ್ನಾಥ, ಚಂದ್ರು ಬಣಕಾರ್, ಅರಣ್ಯ ವೀಕ್ಷಕರಾದ ಕಾರ್ತಿಕ್, ವಾಹನ ಚಾಲಕ ಶಿವಪ್ರಸಾದ್, ಗೇಟ್ ಹಂಗಾಮಿ ನೌಕರ ರಂಗಪ್ಪ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.