ಮಡಿಕೇರಿ, ಡಿ. 3: ಕರ್ನಾಟಕ ರಾಜ್ಯ ಫುಟ್ಬಾಲ್ ಸಂಸ್ಥೆ (ಕೆ.ಎಸ್.ಎಫ್.ಎ) ಸೆಪ್ಟೆಂಬರ್ ತಿಂಗಳಲ್ಲಿ ನಡೆಸಿದ ಕ್ಯಾಟ್- 05 ಫುಟ್ಬಾಲ್ ತೀರ್ಪುಗಾರರ ಆಯ್ಕೆ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಿಲ್ಲೆಯ ಅಭ್ಯರ್ಥಿಗಳಿಗೆ ತಾ. 7 ಹಾಗೂ 8 ರಂದು ಕುಶಾಲನಗರ ಸಮೀಪದ ಗುಡ್ಡೆಹೊಸೂರು ಐಚೆಟ್ಟೀರ ನರೇನ್ ಸುಬ್ಬಯ್ಯ (ಐಎನ್‍ಎಸ್) ಕ್ರೀಡಾ ಅಕಾಡಮಿಯಲ್ಲಿ ಎರಡು ದಿನಗಳ ಪ್ರಾಯೋಗಿಕ ಪರೀಕ್ಷೆಗಳು ನಡೆಯಲಿವೆ ಎಂದು ಜಿಲ್ಲಾ ಫುಟ್ಬಾಲ್ ಸಂಸ್ಥೆಯ ಫುಟ್ಬಾಲ್ ತೀರ್ಪುಗಾರರ ಅಧ್ಯಕ್ಷ ನಾಗೇಶ್ (ಈಶ್ವರ) ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ತಾ. 5 ರೊಳಗೆ ತಮ್ಮ ಹೆಸರು ಕಡ್ಡಾಯವಾಗಿ ನೋಂದಾಣಿ ಮಾಡಿಕೊಳ್ಳಬೇಕು ಹಾಗೂ ರೂ. 500 ನೋಂದಣಿ ಶುಲ್ಕದೊಂದಿಗೆ ತಾ. 7 ರ ಬೆಳಿಗ್ಗೆ 9 ಗಂಟೆಯೊಳಗೆ ಐಎನ್‍ಎಸ್ ಮೈದಾನದಲ್ಲಿ ಹಾಜರಿರತಕ್ಕದ್ದು ಎಂದು ನಾಗೇಶ್ (ಈಶ್ವರ) ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಾಗೇಶ್ ಮೊ. 9481058256, 9535531244 ಸಂಪರ್ಕಿಸಬಹುದು.