ಮಡಿಕೇರಿ, ಡಿ. 3: ಪೆÇನ್ನಂಪೇಟೆ ನ್ಯಾಯಾಲಯದ ವಕೀಲರ ಸಂಘದಲ್ಲಿ ವಕೀಲರ ಸಂಘದ ಅದ್ಯಕ್ಷ ಎಸ್.ಡಿ. ಕಾವೇರಪ್ಪ ಅಧ್ಯಕ್ಷತೆಯಲ್ಲಿ ವಕೀಲರ ದಿನವನ್ನು ಆಚರಿಸಲಾಯಿತು.
ಸಭೆಯಲ್ಲಿ ಬಾಗವಹಿಸಿದ ನ್ಯಾಯಾಧೀಶÀ ಗಿರಿಗೌಡ, ವಕೀಲ ವೃತ್ತಿಯ ಮಹತ್ವ ಮತ್ತು ವಕೀಲರಿಗೆ ವೃತ್ತಿಯಲ್ಲಿ ಉಂಟಾಗುವ ತೊಂದರೆಗಳ ಬಗ್ಗೆ ಮಾತನಾಡಿದರು. ಸರಕಾರಿ ಅಪರ ಅಭಿಯೋಜಕ ರಾಜೇಂದ್ರ ಅವರು ಮಾತನಾಡಿ, ರಾಜೇಂದ್ರ ಪ್ರಸಾದ್ ಅವರ ವ್ಯಕ್ತಿತ್ವದ ಬಗ್ಗೆ ಮತ್ತು ಅವರ ಸಾಧನೆ ಬಗ್ಗೆ ಮಾತನಾಡಿ ಮಹಾತ್ಮಾಗಾಂಧೀಜಿ ಅವರು ಅವರ ವ್ಯಕ್ತಿತ್ವವನ್ನು ಅನುಸರಿಸುತ್ತಿದ್ದರು ಎಂದರು.
ಹಿರಿಯ ವಕೀಲ ಎಮ್.ಟಿ. ಕಾರ್ಯಪ್ಪ ಮಾತನಾಡಿ, ವಕೀಲರಿಂದ ಸಮಾಜದಲ್ಲಿ ಉತ್ತಮ ಕೆಲಸ ನಡೆಯಬೇಕಿದ್ದು, ವಕೀಲರು ತಮ್ಮ ಘನತೆಯನ್ನು ಉಳಿಸಿಕೊಂಡು ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗಬೇಕು ಎಂದರು.
ವಕೀಲರಾದ ಕೆ.ಜಿ. ಅಪ್ಪಣ್ಣ, ನವಲಗುಂದ್, ರಾಜೇಂದ್ರ ಇವರುಗಳು ವಕೀಲರ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವಕೀಲರಾದ ಕೆ.ಕೆ.ಭಿಮಯ್ಯ, ಎಮ್.ಬಿ. ನಾಣಯ್ಯ , ವಿ.ಜಿ. ಮಂಜುನಾಥ್, ಬಿ.ಎಸ್. ಕುಮಾರಿ , ಬಿ.ಎಮ್. ಅಯ್ಯಪ್ಪ, ಸಿ.ಬಿ. ಅನಿತ, ಜೆ.ಎಸ್. ಜ್ಯೊತಿ, ಮೋನಿ, ಜಾನ್ಸಿ ಡಿ.ಆರ್., ಎಮ್.ಸಿ. ಪೂವಣ್ಣ, ಜಿ.ಎಸ್. ಜೀವನ್ , ಟಿ.ಎಮ್. ಅಣ್ಣಯ್ಯ, ಸೂರಜ್ ಮುತ್ತಣ್ಣ , ರವಿಂದ್ರ ಪಿ.ಕೆ., ವಿ.ಎಸ್ . ಸುರೇಶ್ ಮುಂತಾದವರು ಇದ್ದರು. ಕಾರ್ಯದರ್ಶಿ ಎಮ್.ಜಿ. ರಾಕೇಶ್ ನಿರೂಪಿಸಿ, ಉಪಾದ್ಯಕ್ಷ ಕೆ.ಡಿ. ಮುತ್ತಪ್ಪ ವಂದಿಸಿದರು.