ಸಿದ್ದಾಪುರ, ಡಿ. 3: ಅರೆಕಾಡು ಗ್ರಾಮದಲ್ಲಿ ಜಿಲ್ಲಾಡಳಿತ ವಶ ಪಡಿಸಿಕೊಂಡಿದ್ದ ಜಾಗದಲ್ಲಿ ತೆರವು ಕಾರ್ಯಾಚರಣೆ ನಡೆಸಲು ತೆರಳಿದ ವಾಹನಗಳಿಗೆ ತೆರಳಲು ರಸ್ತೆ ಇಲ್ಲದೆ ವಿಳಂಬವಾದ ಘಟನೆ ನಡೆಯಿತು.
ತೆರವು ಕಾರ್ಯಾಚರಣೆ ನಡೆಸುತ್ತಿರುವ ಒತ್ತುವರಿ ಜಾಗಕ್ಕೆ ಜೆಸಿಬಿ ತೆರಳಲು ರಸ್ತೆ ಇಲ್ಲದ ಹಿನ್ನೆಲೆಯಲ್ಲಿ ಖಾಸಗಿ ಕಂಪನಿ ತೋಟವೊಂದರ ಮುಖಾಂತರ ತೆರಳಲು ಮುಂದಾಯಿತು ಎನ್ನಲಾಗಿದೆ ಇದಕ್ಕೆ ತೋಟದ ಸಂಸ್ಥೆಯ ಸಿಬ್ಬಂದಿ ಅವಕಾಶ ನೀಡದ್ದರಿಂದ ಕೆಲ ಕಾಲ ಗೊಂದಲ ಏರ್ಪಟ್ಟಿತು ನಂತರ ಪೊಲೀಸ್ ಇಲಾಖೆಯ ಮುಖಾಂತರ ಮಾತುಕತೆ ನಡೆಸಿ ತಡವಾಗಿ ತೆರವು ಕಾರ್ಯಾಚರಣೆ ಕೆಲಸಕಾರ್ಯಗಳನ್ನು ನಡೆಸಲಾಯಿತು. ಸ್ಥಳದಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ಪಿ.ಡಿ.ಓ. ಅನಿಲ್ ಕುಮಾರ್ ಕಾರ್ಯಾಚರಣೆಯ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದರು.