ಮಡಿಕೇರಿ, ಡಿ. 3: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು ಇದರ ವಾರ್ಷಿಕ ಕಾರ್ಯಕ್ರಮದನ್ವಯ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ರಾಜ್ಯಮಟ್ಟದಲ್ಲಿ ಸಹಕಾರದ ಬಗ್ಗೆ ಚರ್ಚಾ ಸ್ಪರ್ಧೆಯನ್ನು ನಡೆಸಲು ತೀರ್ಮಾನಿಸಿದೆ. ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗಾಗಿ ಕೊಡಗು ಜಿಲ್ಲೆಯಿಂದ ಇಬ್ಬರು ಅಭ್ಯರ್ಥಿಗಳನ್ನು (ವಿಷಯದ ಪರವಾಗಿ ಒಬ್ಬರು ಮತ್ತು ವಿಷಯದ ವಿರುದ್ಧವಾಗಿ ಒಬ್ಬರು) ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಯ್ಕೆ ಮಾಡಿ ಕಳುಹಿಸಿಕೊಡಬೇಕಾಗಿದೆ. ಜಿಲ್ಲಾಮಟ್ಟದಲ್ಲಿ ವಿಜೇತರಾದವರಿಗೆ ಮೂರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತದೆ. ಜಿಲ್ಲಾ ಮತ್ತು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳಿಗೆ ಮಾತ್ರ ಪ್ರಯಾಣ ವೆಚ್ಚ ನೀಡಲಾಗುವದು.

ಜಿಲ್ಲೆಯಿಂದ ರಾಜ್ಯಮಟ್ಟದ ಚರ್ಚಾ ಸ್ಪರ್ಧೆಗೆ ಆಯ್ಕೆ ಮಾಡಲು ಜಿಲ್ಲಾಮಟ್ಟದ ಚರ್ಚಾ ಸ್ಪರ್ಧೆಯನ್ನು ತಾ. 10 ರಂದು ಪೂರ್ವಾಹ್ನ 11 ಗಂಟೆಗೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಂಸ್ಥೆಯಿಂದ ಇಬ್ಬರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಲು ಕಳುಹಿಸಿಕೊಡಬೇಕೆಂದು ಸಹಕಾರ ಯೂನಿಯನ್ ಕೋರಿದೆ.

ಭಾಗವಹಿಸುವ ಅಭ್ಯರ್ಥಿಗಳಲ್ಲಿ ಒಬ್ಬರು ವಿಷಯದ ಪರವಾಗಿ, ಒಬ್ಬರು ವಿಷಯದ ವಿರುದ್ಧವಾಗಿ ಮಾತನಾಡಬೇಕು. ಚರ್ಚಾ ಸ್ಪರ್ಧೆಯ ವಿಷಯವನ್ನು ಆಂಗ್ಲ ಮತ್ತು ಕನ್ನಡ ಭಾಷೆಯಲ್ಲಿ ಮಾತ್ರ ಮಾತನಾಡಲು ಅವಕಾಶವಿದೆ. ಸ್ಪರ್ಧೆಯ ವಿಷಯ ‘ಶಾಲಾ-ಕಾಲೇಜುಗಳಲ್ಲಿ ಸಹಕಾರ ಪಠ್ಯ ವಿಷಯವಾದಲ್ಲಿ ಮಾತ್ರವೇ ಯುವಜನರಲ್ಲಿ ಸಹಕಾರ ಪ್ರಜ್ಞೆಯನ್ನು ಮೂಡಿಸಬಹುದು’ ‘ಅo-oಠಿeಡಿಚಿಣive ಚಿತಿಚಿಡಿeಟಿess ಛಿಚಿಟಿ be ಛಿಡಿeಚಿಣeಜ ಚಿmoಟಿg ಣhe ಥಿouಣh oಟಿಟಥಿ ತಿheಟಿ ಣhe subರಿeಛಿಣ ಅo-oಠಿeಡಿಚಿಣioಟಿ is iಟಿಣಡಿoಜuಛಿeಜ iಟಿ sಛಿhooಟ ಚಿಟಿಜ ಛಿoಟಟeges’.