ಮಡಿಕೇರಿ, ಡಿ. 3: ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಸಾಹಿತಿ, ಕಲಾವಿದರಿಗೆ ಜೀವನ ಸಂಧ್ಯಾಕಾಲ ಜೀವನ ನಡೆಸಲು ಅನುಕೂಲವಾಗುವಂತೆ 58 ವರ್ಷ ದಾಟಿದ, ಆರ್ಥಿಕವಾಗಿ ಹಿಂದುಳಿದ ಆಸಕ್ತ ಸಾಹಿತಿ, ಕಲಾವಿದರಿಗೆ ಮಾಹೆಯಾನ ಮಾಸಾಶನ ಮಂಜೂರು ಮಾಡಲಾಗುತ್ತಿದೆ. ನಾಡಿನ ಸಂಗೀತ, ನೃತ್ಯ, ನಾಟಕ, ಜಾನಪದ ಯಕ್ಷಗಾನ, ಬಯಲಾಟ, ಲಲಿತಕಲೆ, ಶಿಲ್ಪಕಲೆ ಮತ್ತು ಸಾಹಿತ್ಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಕೇಂದ್ರ ಅಥವಾ ರಾಜ್ಯ ಪುರಸ್ಕøತರು ಮತ್ತು ಪುಸ್ತಕ ಬಹುಮಾನ ಪಡೆದವರು ಕೇಂದ್ರ ಅಥವಾ ರಾಜ್ಯ ಅಕಾಡೆಮಿಗಳ ಹಾಲಿ ಮತ್ತು ಮಾಜಿ ಅಧ್ಯಕ್ಷರು, ಸದಸ್ಯರುಗಳು ವಯೋಸಹಜ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಉಚಿತ ವೈದ್ಯಕೀಯ ಗುರುತಿನ ಚೀಟಿ ವಿತರಿಸುವ ಮೂಲಕ ವೈದ್ಯಕೀಯ ವೆಚ್ಚ ಮರುಪಾವತಿ ಸೌಲಭ್ಯವನ್ನು ಕಲ್ಪಿಸಿ ಆದೇಶಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಸಾಹಿತಿ, ಕಲಾವಿದರಿಗೆ ಮಾಸಾಶನ, ಮೃತ ಸಾಹಿತಿ, ಕಲಾವಿದರ ಧರ್ಮಪತ್ನಿಗೆ ವಿಧವಾ ಮಾಸಾಶನ, ಸಾಹಿತಿ, ಕಲಾವಿದರ ವೈದ್ಯಕೀಯ ವೆಚ್ಚ ಮರುಪಾವತಿ ಯೋಜನೆಗಳ ವಾರ್ಷಿಕ ಆದಾಯ ಮಿತಿಯನ್ನು ಏಕರೂಪವಾಗಿ ರೂ. 1 ಲಕ್ಷಗಳಿಗೆ ಹೆಚ್ಚಿಸಿ ಆದೇಶಿಸಿದೆ. ಈ ಯೋಜನೆಯ ಸೌಲಭ್ಯವನ್ನು ಅರ್ಹ ಕಲಾವಿದರು ಪಡೆದುಕೊಳ್ಳಲು ಹಾಗೂ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಮಡಿಕೇರಿ ಇಲ್ಲಿ ಕಚೇರಿ ವೇಳೆಯಲ್ಲಿ ಪಡೆಯುವಂತೆ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.