ಮಡಿಕೇರಿ, ಡಿ. 3: ಮೂಲತಃ ವೃತ್ತಿಯಲ್ಲಿ ವೈದ್ಯರಾಗಿದ್ದುಕೊಂಡು ಸಂಗೀತವನ್ನು ರೂಢಿಸಿಕೊಂಡಿರುವ ಜಿಲ್ಲೆಯ ವ್ಯಕ್ತಿಯೋರ್ವರು ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಿಲ್ಲೆಯ ಗುಡ್ಡೆಹೊಸೂರು ನಿವಾಸಿ, ಪ್ರಸ್ತುತ ಬೆಂಗಳೂರಿನ ಬಿಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಅನಾಟಮಿ ವಿಷಯ ಬೋಧಕರಾಗಿರುವ ಡಾ. ತೋಟಂಬೈಲು ಕಿರಣ್ ಅವರಿಗೆ ‘ಇಂಟರ್ ನ್ಯಾಷನಲ್ ಐಕಾನಿಕ್ ಸ್ಯಾಂಡಲ್‍ವುಡ್ ಬೆಸ್ಟ್ ಮೂಸಿಕ್ ಡೈರೆಕ್ಟರ್’ ಪ್ರಶಸ್ತಿ ಲಭಿಸಿದೆ. ಆರ್. ಚಂದ್ರು ಹಾಗೂ ಉಪೇಂದ್ರ ನಿರ್ಮಾಣದ ‘ಐಲವ್‍ಯೂ’ ಚಿತ್ರದ ಸಂಗೀತಕ್ಕೆ ಪ್ರಶಸ್ತಿ ಲಭ್ಯವಾಗಿದೆ. ಇದೀಗ 6 ಕನ್ನಡ ಸಿನಿಮಾ ಹಾಗೂ ಹಿಂದಿ ಮತ್ತು ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಲು ಕಿರಣ್ ಅವರಿಗೆ ಅವಕಾಶ ದೊರೆತಿದೆ. ಇವರು ಗುಡ್ಡೆಹೊಸೂರು ಗ್ರಾಮದ ಡಾ. ತೋಟಂಬೈಲ್ ವೇಣುಗೋಪಾಲ್ ಹಾಗೂ ಭವಾನಿ ದಂಪತಿಯರ ಪುತ್ರ.