ಮಡಿಕೇರಿ, ಡಿ. 3: ವಕೀಲ ವೃತ್ತಿ ಪವಿತ್ರವಾದದ್ದು ಎಂದು ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ್ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಡಿಕೇರಿ ವಕೀಲರ ಸಂಘದ ವತಿಯಿಂದ ನಗರದ ಕೊಡವ ಸಮಾಜದಲ್ಲಿ ನಡೆದ ವಕೀಲರ ದಿನಾಚರಣೆಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ನ್ಯಾಯಾಂಗದಡಿಯಲ್ಲಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡುವಂತಹ ಕಾರ್ಯನಿರ್ವಹಿಸುವ ವಕೀಲರು ತಮ್ಮ ವೃತ್ತಿಯಲ್ಲಿ ಆಳವಾದ ಅಧ್ಯಯನದೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಕೀಲರ ಸಂಘದ ಅಧ್ಯಕ್ಷ ಕವನ್ ವಹಿಸಿ ದ್ದರು. ಇದೇ ಸಂದರ್ಭ ಹಿರಿಯ ವಕೀಲ ರಾದ ಕೆ.ಡಬ್ಲ್ಯು. ಬೋಪಯ್ಯ, ಹಾಸನ ಮತ್ತು ದಕ್ಷಿಣ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷ ಎ. ಲೋಕೇಶ್‍ಕುಮಾರ್ ಹಾಗೂ ವಕೀಲ ಬಿ.ಸಿ. ಪೂವಯ್ಯ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಜಂಟಿ ಕಾರ್ಯದರ್ಶಿ ಕೇಶವ್, ಖಜಾಂಚಿ ದೇವಿಪ್ರಸಾದ್ ಉಪಸ್ಥಿತರಿದ್ದರು. ವಕೀಲರಾದ ಚೌರೀರ ಅಪ್ಪಣ್ಣ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ದಯಾ ಹೊನ್ನಪ್ಪ ಹಾಗೂ ಲತಾ ಪ್ರಾರ್ಥಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿ ಕಿಶೋರ್ ಸ್ವಾಗತಿಸಿ, ಪವನ್ ಪೆಮ್ಮಯ್ಯ ನಿರೂಪಿಸಿ, ಉಪಾಧ್ಯಕ್ಷ ಪ್ರೀತಂ ವಂದಿಸಿದರು.