ನವದೆಹಲಿ, ಡಿ. 3: ಕೋವಿ ಪರವಾನಗಿ, ಅನಧಿಕೃತ ಶಸ್ತ್ರಾಸ್ತ್ರ ಹೊಂದಿರುವಿಕೆ, ನಿಷೇಧಿತ ಶಸ್ತ್ರಾಸ್ತ್ರ ಬಳಕೆ - ಈ ಎಲ್ಲದಕ್ಕೆ ಕೇಂದ್ರ ಸರಕಾರ ಸಂಸತ್ತಿನಲ್ಲಿ ಸೂಕ್ತ ತಿದ್ದುಪಡಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲು ತಯಾರಿ ನಡೆಸಿದೆ. ಅದಕ್ಕೂ ಮುನ್ನ ಸಚಿವ ಸಂಪುಟ ಸಭೆಯಲ್ಲಿ ಅಗತ್ಯವಾದ ಸಮ್ಮತಿ ಪಡೆಯಲಾಗಿದೆ.
ದೇಶದಲ್ಲಿ ಇನ್ನು ಮುಂದೆ ತಲಾ 3 ಕೋವಿಗಳಿಗೆ ಪರವಾನಗಿ ಸೌಲಭ್ಯ ಹೊಂದಿದ್ದವರು ಅದನ್ನು ಕಳೆದುಕೊಳ್ಳಲಿದ್ದಾರೆ. ತಲಾ ವ್ಯಕ್ತಿಗೆ 1 ಕೋವಿಯನ್ನು ಮಾತ್ರ ಅಧಿಕೃತವಾಗಿ ಬಳಸಲು ಸರಕಾರವು ಪರವಾನಗಿ ನೀಡುತ್ತದೆ. ಕಳೆದ ಬುಧವಾರ ಕೇಂದ್ರ ಸಚಿವ ಸಂಪುಟವು ಶಸ್ತ್ರಾಸ್ತ್ರ ಕಾಯ್ದೆಗೆ 2019ರ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ್ದು, ಕಳೆದ 60 ವರ್ಷಗಳಿಂದ ಇದ್ದ ಕಾಯ್ದೆಯಲ್ಲಿ ಬದಲಾವಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಮಾಜಿ ಸೈನಿಕರು, ಗಣ್ಯಾತಿಗಣ್ಯರೆನಿಸಿಕೊಂಡವರು ಹಾಗೂ ಕೋವಿ ಹಕ್ಕನ್ನು ಪ್ರತಿಪಾದಿಸುವ ವಲಯದ ಅನೇಕ ಮಂದಿ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರಕಾರವು ಈ ತಿದ್ದುಪಡಿಗೆ ಸಮರ್ಥಿಸಿಕೊಂಡ ಅಂಶಗಳು ಹೀಗಿವೆ: ಪರವಾನಗಿಯ ಸೌಲಭ್ಯವನ್ನು ಸಮರ್ಪಕಗೊಳಿಸುವ ಮೂಲಕ ಅನಧಿಕೃತ ಶಸ್ತ್ರಾಸ್ತ್ರಗಳು ಮತ್ತು ಮದ್ದುತೋಪುಗಳ ತಯಾರಿಕೆ ಹಾಗೂ ಅನಧಿಕೃತ ವ್ಯಾಪಾರವನ್ನು ತಡೆಗಟ್ಟಬಹುದಾಗಿದೆ. ಪ್ರಸಕ್ತ ದೇಶದ ಭದ್ರತಾ ವ್ಯವಸ್ಥೆಯನ್ನು ಸಮೀಕರಣಗೊಳಿಸುವ ಮೂಲಕ ಹಾಗೂ ಅನಧಿಕೃತವಾಗಿ ಶಸ್ತ್ರಾಸ್ತ್ರಗಳು ಪ್ರಸರಣಗೊಂಡು ಅಹಿತಕರ ಘಟನೆಗಳಿಗೆ ಆಸ್ಪದ ವಾಗುವದನ್ನು ತಡೆಗಟ್ಟ ಬಹುದಾಗಿದೆ.
ಈ ತಿದ್ದುಪಡಿಯ ಮೂಲಕ ಈ ಹಿಂದೆ ಅನಧಿಕೃತ ಶಸ್ತ್ರಾಸ್ತ್ರ ಹೊಂದಿದವರಿಗೆ 7 ವರ್ಷ ಜೈಲುವಾಸ ಎಂದಿದ್ದುದನ್ನು ಜೀವಾವಧಿ ಶಿಕ್ಷೆಗೆ ಒಳಪಡಿಸಲು ಪರಿವರ್ತಿಸಲಾಗಿದೆ. ಅಲ್ಲದೆ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳ ಅನಧಿಕೃತ ತಯಾರಿಕೆ, ಮಾರಾಟ, ವರ್ಗಾವಣೆ, ದುರಸ್ತಿ, ಪರಿವರ್ತನೆ, ರಫ್ತು ಮತ್ತು ಆಮದು ಮಾಡುವ ವ್ಯವಹಾರಗಳಿಗೆ ಪ್ರಸ್ತುತ ಇದ್ದ 3 ವರ್ಷಗಳ ಜೈಲು ಶಿಕ್ಷೆಯನ್ನು 7 ವರ್ಷಗಳಿಗೆ ಏರಿಸಲಾಗಿದೆ.
ನಿಷೇಧಿತ ಶಸ್ತ್ರಾಸ್ತ್ರ ಅಥವಾ ಮದ್ದು ಗುಂಡುಗಳನ್ನು ಹೊಂದಿರುವದು ಅಥವಾ ಸಾಗಾಟಗೊಳಿಸುವ ಅಪರಾಧಕ್ಕೆ ಈ ಹಿಂದೆ 5 ರಿಂದ 10 ವರ್ಷಗಳವರೆಗೆ ಇದ್ದ ಶಿಕ್ಷೆಯನ್ನು ಇದೀಗ 7 ರಿಂದ 14 ವರ್ಷಗಳವರೆಗೆ ವಿಸ್ತøತಗೊಳಿಸ ಲಾಗಿದೆ. ಅಲ್ಲದೆ ಪೊಲೀಸರು ಅಥವಾ ಯೋಧರಿಂದ ಶಸ್ತ್ರಾಸ್ತ್ರ ಗಳನ್ನು ಕಸಿದುಕೊಂಡವರಿಗೆ ಕನಿಷ್ಟ 10 ವರ್ಷದಿಂದ ಜೀವಾವಧಿವರೆಗೆ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ.
ಸಮಾರಂಭ-ಉತ್ಸವಗಳ ಸಂದರ್ಭ ಶಸ್ತ್ರಾಸ್ತ್ರಗಳನ್ನು ನಿರ್ಲಕ್ಷ್ಯ ಹಾಗೂ ದುಡುಕಿನ ರೀತಿಯಲ್ಲಿ ಬಳಸುವ ಮೂಲಕ ಮಾನವ ಪ್ರಾಣಕ್ಕೆ ಹಾನಿ ಅಥವಾ ವೈಯಕ್ತಿಕ ಭದ್ರತೆಗೆ ಧಕ್ಕೆ ಉಂಟಾಗುವ ಪ್ರಕರಣಗಳಲ್ಲಿ 2 ವರ್ಷ ಜೈಲು ವಾಸ ಅಥವಾ 1 ಲಕ್ಷ ದಂಡ ಅಥವಾ ಈ ಎರಡೂ ಶಿಕ್ಷೆಯನ್ನು ಏಕಕಾಲಕ್ಕೆ ವಿಧಿಸುವ ಅವಕಾಶ ಈ ತಿದ್ದುಪಡಿ ಮೂಲಕ ದೊರಕಲಿದೆ.
ಹಲವರಿಂದ ಆಕ್ಷೇಪ
ಈ ನಡುವೆ ಕೆಲವು ಮಾಜಿ ಯೋಧರು ಗಣ್ಯಾತಿಗಣ್ಯರು, ತಲತ ಲಾಂತರದಿಂದ ಹೊಂದಿಕೊಂಡು ಬಂದಿರುವಂತಹ ಹಕ್ಕನ್ನು ಮೊಟಕು ಗೊಳಿಸುವಂತಹ ಈ ನಿರ್ಧಾರ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.