ಸುಂಟಿಕೊಪ್ಪ, 2 : ಇಲ್ಲಿಗೆ ಸಮೀಪದ ಕೊಡಗರ ಹಳ್ಳಿ ಗ್ರಾಮ ಪಂಚಾಯಿತಿಯ ಕೆಡಿಪಿ ಸಭೆಯು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷ ಹೆಚ್.ಇ. ಅಬ್ಬಾಸ್ ಅಧ್ಯಕ್ಷತೆಯಲ್ಲಿ ನಡೆಯಿತು.

ಅಧ್ಯಕ್ಷತೆ ವಹಿಸಿದ್ದ ಹೆಚ್.ಇ. ಅಬ್ಬಾಸ್ ಮಾತನಾಡಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಆಗಬೇಕಾಗಿದ್ದ ಅಭಿವೃಧ್ದಿ ಕಾರ್ಯ ಮತ್ತು ಕುಂದು ಕೊರತೆಗಳ ಬಗ್ಗೆ ತಿಳಿಸಿವಂತೆ ಸಭೆಗೆ ತಿಳಿಸಿ ಸಭೆಯಲ್ಲಿದ್ದ ಅಧಿಕಾರಿಗಳೊಂದಿಗೆ ಚರ್ಚಿಸಿ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಪಡೆಯಲಾಯಿತು. ಕಂದಾಯ ಇಲಾಖೆ, ಅರಣ್ಯ ಇಲಾಖೆ, ಆಹಾರ ಇಲಾಖೆ, ನೀರಾವರಿ ಇಲಾಖೆ ದೂರವಾಣಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಇಲಾಖೆ ಕಲ್ಲೂರು ಮತ್ತು ಕೊಡಗರಹಳ್ಳಿ ನಾಡÀ ಪ್ರೌಢಶಾಲೆ ಮುಖ್ಯ ಶಿಕ್ಷಕರು ಗೈರು ಹಾಜರಾದ ಬಗ್ಗೆ ಸಭೆಯಲ್ಲಿ ಆಕ್ಷೇಪ ವ್ಯಕ್ತಪಡಿಸಿ ನೋಟಿಸು ಜಾರಿ ಮಾಡುವಂತೆ ಮತ್ತು ಇಂತವರ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸು ವಂತೆ ತೀರ್ಮಾನಿ¸ Àಲಾಯಿತು. ಪಂಚಾಯಿತಿ ಉಪಾಧ್ಯಕ್ಷೆ ಪ್ರೇಮ, ಸದಸ್ಯರಾದ ಉಸ್ಮಾನ್, ಸಲೀಂ, ಜಯಲಕ್ಷ್ಮಿ, ಶಾಲಿನಿ, ನಂಜಪ್ಪ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಎಂ. ಗಿರೀಶ್, ಕಾರ್ಯದರ್ಶಿ ಪಿ.ಕೆ.ಸುಕುಮಾರ್, ಸುಂಟಿಕೊಪ್ಪ ಠಾಣೆಯ ಎಎಸ್‍ಐ ಕಾವೇರಪ್ಪ ಪಂಚಾಯಿತಿಯ ಸಿಬ್ಬಂದಿ ಹಾಜರಿದ್ದರು.