ಚೆಟ್ಟಳ್ಳಿ, ಡಿ. 2: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಮಂಜೂರಾದ ಕಂಪ್ಯೂಟರ್ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭವು ಸಿದ್ದಾಪುರ ಸಮೀಪದ ಬಾಡಗ ಬಾಣಂಗಾಲದಲ್ಲಿ ನಡೆಯಿತು.
ಮಹಲ್ ಖತೀಬ ಮಜೀದ್ ಸಖಾಫಿ ದುಆನೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಮೀರ್ ಸ್ವಾಗತಿಸಿದರು. ಅಲ್ಪಸಂಖ್ಯಾತರ ಇಲಾಖೆ ಅಧ್ಯಕ್ಷ ಯಾಕೂಬ್ ಉದ್ಘಾಟಿಸಿದರು. ಬಶೀರ್ ಅಝ್ಹರಿ ಕತ್ತಲಕಾಡ್ ಮುಖ್ಯ ಭಾಷಣ ನೆರವೇರಿಸಿದರು ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಸ್ಮಾನ್ ಎಂ.ಎ., ಪ್ರಧಾನ ಕಾರ್ಯದರ್ಶಿ ಸೈಯದ್ ಬಾವ. ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಜಾನ್ಸನ್ ಶುಭ ಕೋರಿದರು. ಕಾರ್ಯಕ್ರಮದಲ್ಲಿ ಸಿದ್ದಾಪುರ ಠಾಣೆಯ ಉಪ ಠಾಣಾಧಿಕಾರಿ ಮೋಹನ್ ಮಹಲ್ ಅಧ್ಯಕ್ಷ ಎಂ. ಹುಸೈನ್ ಕಾರ್ಯದರ್ಶಿ ಕೆ. ಉಮರ್ ಪಂಚಾಯಿತಿ ಸದಸ್ಯರಾದ ಬಿ.ಡಿ. ಮುತ್ತು. ಉಮೇಶ್. ಹೇಮಾವತಿ. ಮಾಜಿ ಪಂಚಾಯಿತಿ ಸದಸ್ಯರಾದ ಮುಹಮ್ಮದಲಿ. ಮುಸ್ತಫ, ಅಬ್ದುಲ್ಲಾ ಅಲವಿ ಹಾಜಿ, ಮುಹಮ್ಮದ್ ಕುಜ್ಞ್ ಸಖಾಫಿ. ಅರ್ಥಶಾಸ್ತ್ರ ಅಧ್ಯಾಪಕಿ ಸುನಿತ ಗಿರೀಶ್, ಅಂಗನವಾಡಿ ಅಧ್ಯಾಪಕ ಶೋಭ ಮುಂತಾದವರು ಉಪಸ್ಥಿತರಿದ್ದರು.