ಸಿದ್ದಾಪುರ, ಡಿ. 1 : ಅರೆಕಾಡು ಗ್ರಾಮದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಗಡಿಭಾಗದ ಜಾಗದಲ್ಲಿದ್ದ ಅಡಿಕೆ, ಕಾಫಿ ಫಸಲುಗಳ ಕೊಯ್ಲು ಕಾರ್ಯ ನಡೆಸಲಾಯಿತು. ಕೊಯ್ಲು ಕಾರ್ಯದಲ್ಲಿ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರು ಭಾಗಿಯಾಗಿದ್ದುದು ವಿಶೇಷವಾಗಿತ್ತು. ಒಂದೆರಡು ದಿನಗಳಲ್ಲಿ ಒತ್ತುವರಿ ಜಾಗದಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪಟ್ಟಿ ಮಾಡಿ ತೆರವುಗೊಳಿಸುವ ಕಾರ್ಯ ನಡೆಯಲಿದೆ. ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿರುವ ಒತ್ತುವರಿ ಸಿದ್ದಾಪುರ, ಡಿ. 1 : ಅರೆಕಾಡು ಗ್ರಾಮದಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುತ್ತಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭಾನುವಾರ ಭೇಟಿ ನೀಡಿ ಪರಿಶೀಲಿಸಿದರು. ಗಡಿಭಾಗದ ಜಾಗದಲ್ಲಿದ್ದ ಅಡಿಕೆ, ಕಾಫಿ ಫಸಲುಗಳ ಕೊಯ್ಲು ಕಾರ್ಯ ನಡೆಸಲಾಯಿತು. ಕೊಯ್ಲು ಕಾರ್ಯದಲ್ಲಿ ನೆಲ್ಯಹುದಿಕೇರಿಯ ಪರಿಹಾರ ಕೇಂದ್ರದಲ್ಲಿರುವ ಸಂತ್ರಸ್ತರು ಭಾಗಿಯಾಗಿದ್ದುದು ವಿಶೇಷವಾಗಿತ್ತು. ಒಂದೆರಡು ದಿನಗಳಲ್ಲಿ ಒತ್ತುವರಿ ಜಾಗದಲ್ಲಿದ್ದ ಮರಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಪಟ್ಟಿ ಮಾಡಿ ತೆರವುಗೊಳಿಸುವ ಕಾರ್ಯ ನಡೆಯಲಿದೆ. ಜಿಲ್ಲಾಡಳಿತ ವಶಕ್ಕೆ ಪಡೆದುಕೊಂಡಿರುವ ಒತ್ತುವರಿ ಮುಖಾಂತರ ಜಾಗದಲ್ಲಿರುವ ಕಾಫಿ ಪಸಲುಗಳನ್ನು ಅವರ ಸ್ವಾದೀನಕ್ಕೆ ಪಡೆದುಕೊಳ್ಳುತ್ತಾರೆಂದರು. ತೆರವು ಮಾಡಿದ ಜಾಗದಲ್ಲಿ ಅರಣ್ಯ ಇಲಾಖೆಯು ಮರಗಳನ್ನು ಕಡಿದ ಬಳಿಕ ಮರಗಳನ್ನು ಇಲಾಖೆಯು ವಶಕ್ಕೆ ಪಡೆದುಕೊಳ್ಳುತ್ತದೆ ಎಂದರು. ಮರಗಳನ್ನು ಕಡಿದು ತೆರವುಗೊಳಿಸಿದ ನಂತರ ಪಟ್ಟಣ

(ಮೊದಲ ಪುಟದಿಂದ) ಯೋಜನೆ ನಿರ್ದೇಶಕರುಗಳು ಸ್ಥಳಕ್ಕೆ ಭೇಟಿ ನೀಡಿ ನಿವೇಶನಗಳನ್ನು ವಿಂಗಡಿಸುತ್ತಾರೆ ಎಂದು ಮಾಹಿತಿ ನೀಡಿದರು. ಅಲ್ಲದೆ ಬೆಟ್ಟದಕಾಡುವಿನಲ್ಲಿ ಮರು ಸರ್ವೆ ಮುಕ್ತಾಯಗೊಂಡಿದ್ದು ನ್ಯಾಯಾಲಯಕ್ಕೆ ವರದಿ ನೀಡುವದಾಗಿ ತಿಳಿಸಿದರು.

ಜಿಲ್ಲಾಡಳಿತ ವಶಕ್ಕೆ ಪಡೆದ ಅರೆಕಾಡುವಿನ ಒತ್ತುವರಿ ಸರಕಾರಿ ಜಾಗದಲ್ಲಿ ಜಿಲ್ಲಾಧಿಕಾರಿಗಳು ತುಂತುರು ಮಳೆಯ ನಡುವೆಯೂ ಕಾಲ್ನಡಿಗೆಯಲ್ಲೇ ತೆರಳಿ ತೆರವು ಕಾರ್ಯಾಚರಣೆಯನ್ನು ವೀಕ್ಷಿಸಿ ಪರಿಶೀಲಿಸಿದರು.

ಈ ಸಂದರ್ಭ ಡಿಡಿಎಲ್‍ಆರ್ ಶ್ರೀನಿವಾಸ್, ಎಡಿಎಲ್‍ಆರ್ ಷಂಶುದ್ದಿನ್, ಉಪತಹಶೀಲ್ದಾರ್ ಚಿನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್, ಗ್ರಾಮ ಲೆಕ್ಕಿಗ ಸಂತೋಷ್, ಪಿಡಿಓ ಅನಿಲ್ ಕುಮಾರ್, ಗ್ರಾ.ಪಂ ಉಪಾಧ್ಯಕ್ಷೆ ಸಫಿಯಾ, ಹೋರಾಟ ಸಮಿತಿಯ ಪ್ರಮುಖ ಪಿ.ಆರ್. ಭರತ್ ಹಾಗೂ ಸರ್ವೆ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು. -ವಾಸು