ಮಡಿಕೇರಿ, ಡಿ.2: ಎಚ್‍ಐವಿ/ ಏಡ್ಸ್ ಕುರಿತು ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಜನಜಾಗೃತಿ ಕಾರ್ಯಕ್ರಮವು ತಾ. 2 ರಿಂದ ಆರಂಭಗೊಂಡಿದ್ದು; ತಾ. 10 ರವರೆಗೆ ನಡೆಯಲಿದೆ.

ತಾ. 3 ರಂದು ಚೇರಂಬಾಣೆ, ನಾಪೋಕ್ಲು, ಎಮ್ಮೆಮಾಡು, ತಾ. 4 ರಂದು ಬೊಳ್ಳುಮಾಡು ಮತ್ತು ಕಾಕೋಟುಪರಂಬು, ತಾ. 5 ರಂದು ಬಲಮುರಿ ಮತ್ತು ಮೂರ್ನಾಡು, ತಾ. 6 ರಂದು ಮಡಿಕೇರಿ ಮತ್ತು ಕಡಗದಾಳು, ತಾ. 7 ರಂದು ಕೊಂಡಗೇರಿ, ಅಮ್ಮತ್ತಿ, ತಾ. 8 ರಂದು ನೆಲ್ಯಹುದಿಕೇರಿ ಮತ್ತು ಸಿದ್ದಾಪುರ, ತಾ. 9 ರಂದು ಚೆಟ್ಟಳ್ಳಿ ಮತ್ತು ಸುಂಟಿಕೊಪ್ಪ, ತಾ. 10 ಬಸವನಹಳ್ಳಿ, ಮಾದಪಟ್ಟಣ ಮತ್ತು ಕೂಡಿಗೆ ಇಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಎನ್. ಆನಂದ್ ತಿಳಿಸಿದ್ದಾರೆ.