ಮಡಿಕೇರಿ, ಡಿ.2 : ಮಡಿಕೇರಿ ವಕೀಲರ ಸಂಘ ವತಿಯಿಂದ ವಕೀಲರ ದಿನಾಚರಣೆಯು ತಾ. 3 ರಂದು (ಇಂದು) ಮಧ್ಯಾಹ್ನ 3 ಗಂಟೆಗೆ ನಗರದ ಕೊಡವ ಸಮಾಜದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್.ಕವನ್, ಹೈಕೋರ್ಟ್ ಹಿರಿಯ ನ್ಯಾಯವಾದಿ ಅರವಿಂದ ಕಾಮತ್, ಹಿರಿಯ ವಕೀಲ ಕೆ.ಡಬ್ಲ್ಯು. ಬೋಪಯ್ಯ, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕ ವೇದಿಕೆಯ ಅಧ್ಯಕ್ಷ ಎ. ಲೋಕೇಶ್ ಕುಮಾರ್, ವಕೀಲರು ಹಾಗೂ ನೋಟರಿ ಬಿ.ಸಿ.ಪೂವಯ್ಯ ಇತರರು ಪಾಲ್ಗೊಳಲ್ಲಿದ್ದಾರೆ.