ಮಡಿಕೇರಿ, ಡಿ. 2: ಪರಿಶಿಷ್ಟ ಪಂಗಡದ ಕಲ್ಯಾಣ ಇಲಾಖಾ ವತಿಯಿಂದ ಭಾರತ ಸಂವಿಧಾನ ಅನುಚ್ಛೇದ 275(1) ರಡಿ ಹಾಗೂ ವಿಶೇಷ ಕೇಂದ್ರಿಯ ನೆರವಿನಡಿ ಪರಿಶಿಷ್ಟ ಪಂಗಡದ ಮೂಲ ನಿವಾಸಿ ಜೇನುಕುರುಬ ಅಲೆಮಾರಿ ಅರಣ್ಯ ಅವಲಂಭಿತ ಕಾಡುಕುರುಬ, ಮಲೆ ಕುಡಿಯ, ಎರವ, ಸೋಲಿಗ ಹಾಗೂ ಕುರುಬ (ಕೊಡಗು ಜಿಲ್ಲೆ) ಜನಾಂಗದ ಆಸಕ್ತ ಅಭ್ಯರ್ಥಿಗಳಿಂದ ಹೈನುಗಾರಿಕೆ, ಹಸು, ಎಮ್ಮೆ, ಕರು ಘಟಕ, ಕುರಿ, ಮೇಕೆ ಘಟಕ, ಸರಕು ಸಾಗಾಣಿಕೆ ವಾಹನ, ಮೊಲ ಸಾಕಾಣಿಕೆ ಹಾಗೂ ಹಂದಿ ಸಾಕಾಣಿಕೆ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು ಒಂದು ಕಾರ್ಯಕ್ರಮಕ್ಕೆ ಒಬ್ಬರು ಮಾತ್ರ ಸಲ್ಲಿಸಲು ಅವಕಾಶವಿರುವದರಿಂದ ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಸೋಮವಾರಪೇಟೆ ಇಲ್ಲಿಗೆ ತಾ. 9 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂ. 08276-281115 ನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.