ಗೋಣಿಕೊಪ್ಪ ವರದಿ, ಡಿ. 1: ಭಾರತೀಯ ಅರಣ್ಯ ಸೇವೆಯ ನಿವೃತ್ತ ಡಾ. ಕೋಡೀರ ಎ. ಕುಶಾಲಪ್ಪ ಅವರ ಆತ್ಮಚರಿತ್ರೆ ‘ಕೊಡವ ಫಾರೆಸ್ಟರ್’ ಪುಸ್ತಕವನ್ನು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಬಿಡುಗಡೆಗೊಳಿಸಲಾಯಿತು.
ಡಾ. ಕೋಡೀರ ಎ. ಕುಶಾಲಪ್ಪ, ನಿವೃತ್ತ ಅರಣ್ಯಾಧಿಕಾರಿಗಳಾದ ಆರ್. ಎನ್. ಪಾಲಣ್ಣ, ಡಾ. ಎಸ್. ಎನ್. ರಾಯ್, ಕೊಡಗು ವೃತ್ತ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಹೀರಲಾಲ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಮುಖ್ಯಸ್ಥ ಡಾ. ಚೆಪ್ಪುಡೀರ ಜಿ. ಕುಶಾಲಪ್ಪ ಲೋಕಾರ್ಪಣೆಗೊಳಿಸಿದರು.
ವೃತ್ತ ಅಧಿಕಾರಿ ಆರ್. ಎನ್. ಪಾಲಣ್ಣ ಮಾತನಾಡಿ, ಸರಳ ಹಾಗೂ ಪ್ರಾಮಾಣಿಕ ನಡೆ ಯುವ ಅಧಿಕಾರಿಗಳಿಗೆ ಮಾದರಿ ಎಂದರು.
ಕೊಡಗು ವೃತ್ತ ಪ್ರಭಾರ ಮುಖ್ಯ ಅರಣ್ಯ ಸಂರಕ್ಷಾಧಿಕಾರಿ ಹೀರಲಾಲ್ ಮಾತನಾಡಿ, ಕುಶಾಲಪ್ಪ ಅವರ ಆತ್ಮಚರಿತ್ರೆ ಅರಣ್ಯ ಇಲಾಖೆಗೆ ಗ್ರಂಥಾಲಯವಿದ್ದಂತೆ ಎಂದರು.
ಡಾ. ಕೋಡೀರ ಎ. ಕುಶಾಲಪ್ಪ ಮಾತನಾಡಿ, ಅರಣ್ಯ ರಕ್ಷಣೆ ದೃಷ್ಠಿಯಿಂದ ಅರಣ್ಯ ಇಲಾಖೆಗೆ ಯುವ ಜನತೆಯನ್ನು ಪ್ರೋತ್ಸಾಹಿಸಲು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ, ಕೊಡವ ಸಮಾಜ ಮತ್ತು ಶಿಕ್ಷಣ ಸಂಸ್ಥೆಗಳಿಗೆ ಪುಸ್ತಕ ನೀಡಲಾಗುವದು ಎಂದರು.
ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟ್ ಕಾರ್ಯದರ್ಶಿ ಶರಿ ಸುಬ್ಬಯ್ಯ, ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯ ಅಲ್ಮಿನಿ ಅಸೋಸಿಯೇಷನ್ ಕಾರ್ಯದರ್ಶಿ ಪ್ರಭಾಕರ್ ಕಣ್ವೆ, ಕಾಲೇಜು ಪ್ರ್ರಾಧ್ಯಾಪಕ ಡಾ. ರಾಮಕೃಷ್ಣಹೆಗ್ಡೆ, ಡಾ. ಜಿ.ಎಂ ದೇವಗಿರಿ ಸೇರಿದಂತೆ ಅರಣ್ಯ ಅಧಿಕಾರಿಗಳು ಪಾಲ್ಗೊಂಡಿದ್ದರು.