ಮಡಿಕೇರಿ, ಡಿ. 1: ಕೊಡಗು ಪೊಲೀಸ್ ಶಸಸ್ತ್ರ ಘಟಕಕ್ಕೆ ಸಿಬ್ಬಂದಿಗಳ ನೇಮಕಾತಿ ಸಂಬಂಧ ಇಂದು ನಡೆದ ಲಿಖಿತ ಪರೀಕ್ಷೆಯಲ್ಲಿ ಶೇ. 75ರಷ್ಟು ಮಂದಿ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ. ಲಿಖಿತ ಪರೀಕ್ಷೆಗೆ ಹೆಸರು ನೋಂದಾಯಿಸಿಕೊಂಡಿದ್ದ 3637 ಮಂದಿ ಅಭ್ಯರ್ಥಿಗಳ ಪೈಕಿ 2725ರಷ್ಟು ಮಂದಿ ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರು ಮಾಹಿತಿ ನೀಡಿದ್ದಾರೆ.