ಮಡಿಕೇರಿ, ಡಿ. 1: ಕರ್ನಾಟಕ ರಾಜ್ಯ ಸರಕಾರವು ಪ್ರತಿ ತಿಂಗಳ 2ನೇ ಹಾಗೂ 4ನೇ ಶನಿವಾರ ಘೋಷಿಸಿರುವ; ಸರಕಾರಿ ನೌಕರರ ರಜೆಯನ್ನು ಆರೋಗ್ಯ ಮತ್ತು ಶಿಕ್ಷಣ ಇಲಾಖೆ ನೌಕರರು ಸಾಂದರ್ಭಿಕವಾಗಿ ಪಡೆಯುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆದೇಶಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರಿಗೆ ಹಲವಾರು ವರ್ಷಗಳಿಂದ ತಿಂಗಳ ಎರಡನೇ ಶನಿವಾರ ರಜೆ ನೀಡಲಾಗುತ್ತಿದ್ದು; ತಾ. 13.6.2019ರ ಆದೇಶದಲ್ಲಿ ಪ್ರತಿ ತಿಂಗಳ 2 ಹಾಗೂ 4ನೇ ಶನಿವಾರ ರಜಾಗಳನ್ನು ಮುಂದುವರೆಸಲು ಆದೇಶಿಸಲಾಗಿದೆ. ಇದರಿಂದ ಸದರಿ ರಜಾ ಸೌಲಭ್ಯ ಗಳನ್ನು ಪಡೆಯದೆ ಕೆಲವು ಇಲಾಖೆಯ ನೌಕರರಿಗೆ ಸಾಂದರ್ಭಿಕ ರಜೆಗಳು 15 ರಿಂದ ಕಡಿತಗೊಳಿಸಿ; 10 ಕ್ಕೆ ಮಿತಿಗೊಳಿಸಲಾಗಿದೆ. 2ನೇ ಶನಿವಾರ ಹಾಗೂ

(ಮೊದಲ ಪುಟದಿಂದ) 4ನೇ ಶನಿವಾರ ರಜೆಗಳನ್ನು ಪಡೆಯದ ಶಿಕ್ಷಣ ಹಾಗೂ ಆರೋಗ್ಯ ಇಲಾಖೆಯ ಕೆಲವು ನೌಕರರಿಗೆ ಇದರಿಂದ ಅನಾನುಕೂಲವಾಗುತ್ತಿದ್ದು; ಅವರಿಗೆ ಈ ಹಿಂದೆ ಇದ್ದ ವಾರ್ಷಿಕ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಗಳನ್ನು ಮುಂದುವರೆಸುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಕೋರಿಕೆಯಂತೆ ಶಿಕ್ಷಣ ಇಲಾಖೆಯ ಹಾಗೂ ಆರೋಗ್ಯ ಇಲಾಖೆಯಲ್ಲಿ ಯಾರೂ ಪ್ರತಿ ತಿಂಗಳು 2 ಹಾಗೂ 4ನೇ ಶನಿವಾರದ ರಜೆಗಳನ್ನು ಪಡೆಯುದಿಲ್ಲವೋ; ಅಂತಹ ನೌಕರರಿಗೆ ಈ ಹಿಂದೆ ಇದ್ದಂತೆ 15 ಸಾಂದರ್ಭಿಕ ರಜೆ ಹಾಗೂ 2 ಪರಿಮಿತ ರಜೆಗಳನ್ನು ಮುಂದುವರೆಸಲು ಆದೇಶಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನ. 30 ರಂದು ಆದೇಶ ಹೊರಡಿಸಿದ್ದಾರೆ.