ಮಡಿಕೇರಿ, ಡಿ. 1: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಆರನೇ ವರ್ಷದ ಡಾ. ಅಖಿಲ್ ಕುಟ್ಟಪ್ಪ - ಅಶ್ವಥ್ ಅಯ್ಯಪ್ಪ ಸ್ಮಾರಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಾಪ್ಸ್ ಗೋಣಿಕೊಪ್ಪ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಾಲ್ಸ್ ಗೋಣಿಕೊಪ್ಪ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಅಂತಿಮ ಪಂದ್ಯಾಟದಲ್ಲಿ ಮೊದಲು ಬ್ಯಾಟ್ ಮಾಡಿದ ಕಾಪ್ಸ್ ಗೋಣಿಕೊಪ್ಪ (ಮೊದಲ ಪುಟದಿಂದ) ತಂಡ 25 ಓವರ್‍ಗಳಿಗೆ 118 ರನ್‍ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಕಾಲ್ಸ್ ತಂಡ 95 ರನ್‍ಗಳಿಗೆ ಆಲೌಟ್ ಆಯಿತು. ಸಮಾರೋಪ ಸಮಾರಂಭಕ್ಕೆ ಅತಿಥಿಗಳಾಗಿ ಅಧ್ಯಾತ್ಮಿಕ ಗುರು ಶ್ರೀಎಂ, ಶಂಕರ್ ಕ್ರಿಕೆಟ್ ಅಕಾಡೆಮಿ ಸಲಹೆಗಾರ ಮುನೀರ್ ಅಹ್ಮದ್ ಇತರರು ಪಾಲ್ಗೊಂಡಿದ್ದರು.