ಮಡಿಕೇರಿ, ಡಿ. 1: ವಾತಾವರಣದಲ್ಲಿ ಮತ್ತೊಮ್ಮೆ ಬದಲಾವಣೆ ಉಂಟಾಗಿದ್ದು; ಜಿಲ್ಲೆಯಾದ್ಯಂತ ಮಳೆಯ ಸನ್ನಿವೇಶ ಗೋಚರಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕೊಡಗು ಮಡಿಕೇರಿ, ಡಿ. 1: ವಾತಾವರಣದಲ್ಲಿ ಮತ್ತೊಮ್ಮೆ ಬದಲಾವಣೆ ಉಂಟಾಗಿದ್ದು; ಜಿಲ್ಲೆಯಾದ್ಯಂತ ಮಳೆಯ ಸನ್ನಿವೇಶ ಗೋಚರಿಸಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕೊಡಗು ಶುರುವಾದ ಮಳೆ ಸ್ವಲ್ಪಮಟ್ಟಿಗೆ ಬಿರುಸನ್ನು ತೋರಿತ್ತಲ್ಲದೆ; ಜಿಲ್ಲೆಯಲ್ಲಿ ನೈಜ ಮಳೆಗಾಲದ ರೀತಿಯ ಸನ್ನಿವೇಶ ಮೂಡಿದೆ. ಅಪರಾಹ್ನ ದಿಢೀರನೆ ಸುರಿದ ಪರಿಣಾಮ, ಸಾರ್ವಜನಿಕರು ಅಲ್ಲಲ್ಲಿ ಆಶ್ರಯ ಪಡೆಯಬೇಕಾಯಿತು. ದ್ವಿಚಕ್ರ ಸವಾರರು ಇದರಿಂದಾಗಿ ಪರದಾಡಬೇಕಯಿತು. ಹವಾಮಾನ ಇಲಾಖೆ ಕೊಡಗು ಹಾಗೂ ಶಿವಮೊಗ್ಗದಲ್ಲಿ ತಾ. 2 ರಂದು (ಇಂದು) ಆರೆಂಜ್ ಅಲರ್ಟ್ ಘೋಷಿಸಿದೆ. ತಾ. 3 ರಂದು ಕರಾವಳಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಸುರಿಯುವ ಸಾಧ್ಯತೆ ಇದೆ ಎನ್ನಲಾಗಿದೆ.ಜಿಲ್ಲೆಯಲ್ಲಿ ಪ್ರಸ್ತುತ ಭತ್ತದ ಫಸಲು ಕುಯಿಲಿಗೆ ಬಂದಿದ್ದು; ಧಾನ್ಯಲಕ್ಷ್ಮಿ ಯನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ವಾತಾವರಣದಲ್ಲಿ ಬದಲಾವಣೆಯಾಗಿರುವದು ರೈತರಲ್ಲಿ ಆತಂಕ ಮೂಡಿಸಿದೆ. ಕಾಫಿ ತೋಟದ ಕೆಲಸ ನಿರ್ವಹಣೆಗೂ ಈ ಸನ್ನಿ ವೇಶದಿಂದಾಗಿ ಅಡಚಣೆಯಾಗುತ್ತಿದೆ.

ಸೋಮವಾರಪೇಟೆ: ಕಳೆದ ಕೆಲ ದಿನಗಳಿಂದ (ಮೊದಲ ಪುಟದಿಂದ) ಮುಂದುವರೆದಿರುವ ಅಕಾಲಿಕ ಮಳೆ ಹಾಗೂ ಮೋಡ ಮುಸುಕಿದ ವಾತಾವರಣದಿಂದ ಭತ್ತ ಹಾಗೂ ಕಾಫಿ ಬೆಳೆಗಾರರಲ್ಲಿ ಚಿಂತೆಯ ಕಾರ್ಮೋಡ ಮೂಡಿದೆ.

ತಾಲೂಕಿನ ಹಲವು ಭಾಗಗಳಲ್ಲಿ ಈಗಾಗಲೇ ಕಾಫಿ ಕೊಯ್ಲು ಪ್ರಾರಂಭವಾಗಿದ್ದು, ಪಲ್ಪರ್ ಮಾಡಿದ ಬೇಳೆಯನ್ನು ಒಣಗಿಸಲು ಪೂರಕ ವಾತಾವರಣ ಇಲ್ಲದಾಗಿದೆ. ಕಳೆದ ಒಂದು ವಾರದಿಂದ ಮೋಡ ಮುಸುಕಿದ ವಾತಾವರಣ, ಆಗಾಗ್ಗೆ ಸುರಿಯುವ ಮಳೆ, ಇಬ್ಬನಿಯ ಹನಿಗಳಿಂದಾಗಿ ಕಾಫಿ ಬೇಳೆಯನ್ನು ಒಣಗಿಸಲು ಸಾಧ್ಯವಾಗುತ್ತಿಲ್ಲ.

ಇದರೊಂದಿಗೆ ಕಾಫಿ ಗಿಡಗಳಲ್ಲಿ ಹಣ್ಣಾಗಿರುವ ಕಾಫಿಯನ್ನು ಕೊಯ್ಲು ಮಾಡಲೂ ಸಹ ಹಿಂದೆ ಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಕಣದಲ್ಲಿರುವ ಕಾಫಿಯನ್ನು ಒಣಗಿಸಿ ಶೇಖರಣೆ ಮಾಡುವದೂ ಕಷ್ಟಕರವಾಗಿದ್ದು, ತೇವಾಂಶ ಹೋಗದೇ ಇದ್ದಲ್ಲಿ, ಶೇಖರಿಸುವ ಕಾಫಿ ಕಪ್ಪು ಬಣ್ಣಕ್ಕೆ ತಿರುಗಿ ಗುಣಮಟ್ಟವನ್ನು ಕಳೆದುಕೊಳ್ಳಲಿದೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.

ಇನ್ನು ಗದ್ದೆಗಳಲ್ಲಿ ಭತ್ತದ ತೆನೆ ಬಲಿಯುತ್ತಿದ್ದು, ಈ ಸಮಯದಲ್ಲಿ ಮಳೆ ಬೀಳುತ್ತಿರುವದರಿಂದ ಇಳುವರಿಯಲ್ಲಿ ಇಳಿಕೆಯಾಗುವ ಆತಂಕ ರೈತಾಪಿ ವರ್ಗವನ್ನು ಕಾಡುತ್ತಿದೆ. ಒಟ್ಟಾರೆ ಅಧಿಕ ಕೂಲಿ, ಉತ್ಪಾದನಾ ವೆಚ್ಚದ ನಡುವೆಯೂ ಕೃಷಿ ಕೈಗೊಂಡಿರುವ ರೈತರು ಅಕಾಲಿಕ ಮಳೆ-ಮೋಡದ ವಾತಾವರಣಕ್ಕೆ ಚಿಂತಾಕ್ರಾಂತರಾಗಿದ್ದಾರೆ.

ಕೆಲವೆಡೆಗಳಲ್ಲಿ ಈಗಾಗಲೇ ಭತ್ತದ ಕಟಾವು ಮಾಡಲಾಗಿದ್ದು, ಮಳೆಯಿಂದಾಗಿ ಪೈರಿನಲ್ಲಿಯೇ ಭತ್ತ ನೆಲಕ್ಕಚ್ಚುತ್ತಿದೆ. ಕಟಾವು ಮಾಡಿರುವ ಪೈರಿಗೆ ಶೀತ ತಟ್ಟಿದರೆ ಭತ್ತ ಉದುರುವ ಆತಂಕ ಮೂಡಿದೆ. ಪರಿಣಾಮ ಭತ್ತ ಬೆಳೆದ ರೈತ ಫಸಲು ನಷ್ಟ ಅನುಭವಿಸುವದು ಅನಿವಾರ್ಯವಾಗಲಿದೆ. ಒಟ್ಟಾರೆ ಅಕಾಲಿಕ ಮಳೆ ಸದ್ಯದ ಮಟ್ಟಿಗೆ ರೈತರ ನೆಮ್ಮದಿ ಕಸಿದಿದೆ.

ಗೋಣಿಕೊಪ್ಪ : ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದ ಮಳೆ ಸಂಜೆಯವರೆಗೂ ಮುಂದುವರೆಯಿತು.

ಗೋಣಿಕೊಪ್ಪದಲ್ಲಿ ಧಾರಾಕಾರ ಮಳೆಯಾಗಿದ್ದು, ಪೊನ್ನಂಪೇಟೆ, ಮಂಚಳ್ಳಿ, ಕುಟ್ಟ, ಬೇಗೂರು, ತೂಚಮಕೇರಿ, ಹುದಿಕೇರಿ, ವೀರಾಜಪೇಟೆ, ಕೊಟ್ಟಗೇರಿ, ಕಾನೂರು, ಕುರ್ಚಿ, ಬಲ್ಯಮುಂಡೂರು, ಹಳ್ಲಿಗಟ್ಟು, ಕೈಕೇರಿ, ಬಿರುನಾನಿ, ಪಾಲಿಬೆಟ್ಟ, ದೇವನೂರು, ಟಿ. ಶೆಟ್ಟಿಗೇರಿ, ಸುಳುಗೋಡು, ಹಾಕತ್ತೂರು, ಧನುಗಾಲ, ಅಮ್ಮತ್ತಿ, ಕರಡ, ಪಾರಾಣೆ, ಕದನೂರು, ನಾಲ್ಕೇರಿ ಭಾಗದಲ್ಲಿ ಸಂಜೆಯವರೆಗೂ ಮುಂದುವರಿಯಿತು.

ಕೂಡಿಗೆ: ಕೂಡಿಗೆ ಕೂಡುಮಂಗಳೂರು, ಹೆಬ್ಬಾಲೆ ವ್ಯಾಪ್ತಿಯಲ್ಲಿ ಇಂದು ಭಾರೀ ಮಳೆಯಾಗಿದೆ. ಮಳೆಯಿಂದಾಗಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ರಥೋತ್ಸವ ಅಂಗವಾಗಿ ಏರ್ಪಡಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ವಿದ್ಯಾಥಿಗಳನ್ನು ಗೌರವಿಸುವ ಕಾರ್ಯಕ್ರಮವನ್ನು ಮುಂದೂಡಲಾಯಿತು. ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗಿದ್ದು; ಜನಜೀವನ ಅಸ್ತವ್ಯಸ್ತಗೊಂಡಿತು. ಷಷ್ಠಿ ಪ್ರಯುಕ್ತ ಕುಶಾಲನಗರ ರಥಬೀದಿಯಲ್ಲಿ ಏರ್ಪಡಿಸಲಾಗಿದ್ದ ರಂಗೋಲಿ ಸ್ಪರ್ಧೆ ಕಾರ್ಯಕ್ರಮ ಮುಂದೂಡಲ್ಪಟ್ಟಿದೆ.

ಸುಂಟಿಕೊಪ್ಪ: ಸುಂಟಿಕೊಪ್ಪದಲ್ಲಿ ಅಕಾಲಿಕ ಧಾರಕಾರ ಮಳೆಯಿಂದ ಕೃಷಿಕರು ಸಾರ್ವಜನಿಕರು ಕಂಗಾಲಾಗುವಂತಾಗಿದೆ. ಸಂತೆ ದಿನವಾದ ಭಾನುವಾರ ಸಂತೆಗಾಗಿ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾರ್ವಜನಿಕರು, ವ್ಯಾಪಾರಸ್ಥರು ಸಂಜೆ ಸುರಿದ ಭಾರೀ ಮಳೆಯಲ್ಲಿ ಪರದಾಡುವಂತಾಯಿತು. ಕಾಫಿ ತೋಟಗಳಲ್ಲಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರು ಕೊಯ್ದು ಕಾಫಿಯನ್ನು ಒಣಗಿಸಲು ಪರದಾಡುವಂತಾಗಿದೆ. ಭತ್ತದ ಬೆಳೆಗೂ ಹಾನಿಯಾಗಿದೆ.