ಪೊನ್ನಂಪೇಟೆ, ಡಿ. 1: ಗೋಣಿಕೊಪ್ಪಲು ಕಾವೇರಿ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಿಶೇಷ ವಾರ್ಷಿಕ ಶಿಬಿರವನ್ನು ತಾ. 21 ರಿಂದ 27 ರವರೆಗೆ ಕಿರುಗೂರುವಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ಇದರ ಪೂರ್ವಭಾವಿ ಸಭೆಯನ್ನು ನಡೆಸಲಾಯಿತು. ಈ ಸಂದರ್ಭ ಶಿಬಿರದ ಯಶಸ್ವಿಗೆ ಗ್ರಾಮಸ್ಥರ ಸಹಕಾರ ಕೋರಲಾಯಿತು. ಗ್ರಾಮಸ್ಥರಿಗೆ ಗ್ರಾಮೀಣ ಕ್ರೀಡಾಕೂಟ, ಆರೋಗ್ಯ ತಪಾಸಣಾ ಶಿಬಿರ, ಸ್ವಚ್ಛತೆಯ ಬಗ್ಗೆ ಅರಿವು ನೀಡುವದು ಹಾಗೂ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮ ನಡೆಸುವದರ ಬಗ್ಗೆ ಚರ್ಚಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ. ರಾಜಮ್ಮ ಅವರ ಅಧÀ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಿರುಗೂರು ಗ್ರಾ.ಪಂ. ಸದಸ್ಯರಾದ ಪಿ.ಎಸ್. ಮಂಜುನಾಥ್, ಆಲೆಮಾಡ ಸುಧೀರ್, ಎಸ್.ಡಿ.ಎಂ.ಸಿ. ಅಧÀ್ಯಕ್ಷ ಮೂರ್ತಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಸುರೇಶ, ಕಿರಗೂರು ಯೂತ್ ಕ್ಲಬ್ ಸದಸ್ಯ ಚೆರಿಯಪ್ಪಂಡ ಕೀರ್ತನ್, ಎನ್‍ಎಸ್‍ಎಸ್ ಅಧಿಕಾರಿ ಎಂ.ಎನ್. ವನಿತ್‍ಕುಮಾರ್, ಶಾಲಾ ಶಿಕ್ಷಕಿಯರಾದ ಎಂ.ಎನ್. ಮೀನಾಕ್ಷಿ, ಸಿ.ಕೆ. ಲಲಿತ, ಎಂ.ಎ. ಶ್ರೀಜಾ ಹಾಗೂ ಕಿರುಗೂರು ಗ್ರಾಮಸ್ಥರು ಹಾಜರಿದ್ದರು.