ಮಡಿಕೇರಿ, ಡಿ. 1: ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಮಾತೃವಂದನಾ ಸಪ್ತಾಹ ಉದ್ಘಾಟನಾ ಕಾರ್ಯಕ್ರಮವುತಾ. 2ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಚಾಲನೆ ದೊರೆಯಲಿದೆ.

ಕಾರ್ಯಕ್ರಮವನ್ನು ಪಿಎಂಎಂವಿವೈ ಸೆಲ್ಫಿ ಬೂತ್ ನಿರ್ಮಿಸಿ ಫಲಾನುಭವಿಗಳ ಸೆಲ್ಫಿ ತೆಗೆಯುವ ಮುಖಾಂತರ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಲಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಅರುಂಧತಿ ತಿಳಿಸಿದ್ದಾರೆ.