ಶ್ರೀಮಂಗಲ, ನ. 30: ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಮಹಾಸಭೆ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂದರ್ಭ ಹಲವು ವಿಶೇಷ ತೀರ್ಮಾನಗಳನ್ನು ತೆಗೆದುಕೊಳ್ಳ ಲಾಯಿತು. ಇತ್ತೀಚೆಗೆ ಸಾವಿನ ಮನೆಯಲ್ಲಿ ಮದ್ಯ ಬಳಸುವದು ಹೆಚ್ಚಾಗುತ್ತಿದ್ದು; ಇದು ಕೊಡವ ಜನಾಂಗದ ಸಂಸ್ಕøತಿಗೆ ಹಾಗೂ ಕೊಡವ ಜನಾಂಗಕ್ಕೆ ಧಕ್ಕೆ ತರುವಂತದ್ದಾಗಿ ರುತ್ತದೆ. ಸಾವಿನ ಮನೆಯಲ್ಲಿ ಎಲ್ಲರೂ ಬೇಸರದಲ್ಲಿರುವ ಸಂದರ್ಭ ಮದ್ಯ ಸೇವನೆ ಮಾಡುವದು ಸಮಂಜಸವಲ್ಲದಿರುವದರಿಂದ ಮದ್ಯ ಬಳಕೆಯನ್ನು ನಿಷೇಧಿಸಬೇಕೆಂದು ಸರ್ವಾನುಮತದಿಂದ ಸಭೆಯಲ್ಲಿ ತೀರ್ಮಾನಿಸಲಾಯಿತು. ಈಗಾಗಲೇ ನೆಮ್ಮಲೆ ಹಾಗೂ ವಗರೆ ಗ್ರಾಮಗಳಲ್ಲಿ ನಿಷೇಧಿಸಿರುವಂತೆ ತಾವಳಗೇರಿ ಮೂಂದ್‍ನಾಡ್ ವ್ಯಾಪ್ತಿಗೊಳಪಡುವ ಎಲ್ಲ್ಲ ಗ್ರಾಮಗಳಲ್ಲೂ ಸಾವಿನ ಮನೆಯಲ್ಲಿ ಮದ್ಯ ಬಳಕೆ ನಿಷೇಧಿಸು ವಂತೆ ಆಯಾ ಗ್ರಾಮಗಳ ಹಾಗೂ ಕೊಡವ ಕುಟುಂಬಗಳ ಮಹಾಸಭೆ ಮತ್ತಿತರ ಕಾರ್ಯ ಕ್ರಮಗಳಲ್ಲಿ ಕೊಡವ ಸಮಾಜದ ಆಡಳಿತ ಮಂಡಳಿಯ ನಿರ್ದೇಶಕರು ಹಾಜರಾಗಿ ಮನವೊಲಿ ಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಕೈಲ್‍ಪೊಳ್ದ್ ಕೊಡವರ ಆಯುಧ ಪೂಜೆಯಾಗಿದ್ದು ತಾವಳಗೇರಿ ಮೂಂದ್‍ನಾಡ್ ವ್ಯಾಪ್ತಿಯ ಎಲ್ಲಾ ಕೊಡವರು ಇತರ ಸಂದರ್ಭಗಳಲ್ಲಿ ಆಯುಧ ಪೂಜೆ ಮಾಡದೆ ಕೈಲ್ ಪೊಳ್ದ್ ದಿವಸವೇ ಅವರವರ ಮನೆಗಳಲ್ಲಿ ಆಯುಧ, ಹತ್ಯಾರು ಹಾಗೂ ವಾಹನಗಳಿಗೆ ಪೂಜೆ ಮಾಡುವಂತೆ ಹಾಗೂ ಕೊಡವ ಸಮಾಜದ ವತಿಯಿಂದ ಕೈಲ್‍ಪೊಳ್ದ್ ಸಂತೋಷ ಕೂಟವನ್ನು ಅರ್ಥ ಪೂರ್ಣವಾಗಿ ನಡೆಸುವಂತೆ ಸಭೆಯಲ್ಲಿ ತೀರ್ಮಾನಿ ಸಲಾಯಿತು. 10 ದಿನಗಳವರೆಗೆ ವಿಶೇಷವಾಗಿ
(ಮೊದಲ ಪುಟದಿಂದ) ಚಂಗ್ರಾಂದಿ ಪತ್ತಲೋದಿ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದು ವಿಶ್ವದಾದ್ಯಂತ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಕೀರ್ತಿ ಹಬ್ಬಿದ್ದ ಈ ಕಾರ್ಯಕ್ರಮವನ್ನು ಕೊಡವ ಸಮಾಜಕ್ಕೆ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಪ್ರತಿವರ್ಷ ನಡೆಸುವಂತೆ ತೀರ್ಮಾನಿಸಲಾಯಿತು.
ಪ್ರಸ್ತುತ ಕೊಡವ ಸಮಾಜದ ಸದಸ್ಯತ್ವ ಶುಲ್ಕವು ಒಂದು ಸಾವಿರ ರೂ. ಗಳಿದ್ದು ಮಾರ್ಚ್ 31ರ ವರೆಗೆ ಈ ಶುಲ್ಕವನ್ನೇ ಮುಂದುವರಿಸುವಂತೆ ಏಪ್ರಿಲ್ ಒಂದರಿಂದ ಒಂದು ಸಾವಿರದ ಐನೂರು ರೂ.ಗಳಿಗೆ ಹೆಚ್ಚಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ ಮಾತನಾಡಿ; ಕ್‍ಗ್ಗಟ್ಟ್ ನಾಡ್ ವ್ಯಾಪ್ತಿಯಲ್ಲಿ ಪ್ರಥಮವಾಗಿ 1979ರಲ್ಲಿ ಆರಂಭವಾದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜವು ಇದುವರೆಗೆ ಕೈಗೊಂಡ ವಿವಿಧ ಉತ್ತಮ ಕಾರ್ಯಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕೊಡವ ಸಮಾಜವು ಇದೀಗ ಒಂದು ಸಾವಿರ ಜನರು ಸೇರಿ ನಡೆಸುವ ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಬೇಕಾಗುವ ಪಾತ್ರೆ ಸೇರಿದಂತೆ ಎಲ್ಲ್ಲ ವ್ಯವಸ್ಥೆಯನ್ನು ಹೊಂದಿದ್ದು ಈ ಅತ್ಯಂತ ಕಡಿಮೆ ಬಾಡಿಗೆಗೆ ಸಮಾಜ ಕಟ್ಟಡವನ್ನು ನೀಡಲಾಗುವದು. ಕ್ರೀಡೆ ಹಾಗೂ ಸಾಂಸ್ಕøತಿಕ ಕೇಂದ್ರವನ್ನು ಸ್ಥಾಪಿಸಿದ್ದು, ಇದರಲ್ಲಿ ಸದಸ್ಯರು ವಿವಿಧ ಆಟಗಳನ್ನು ಆಡುವದರೊಂದಿಗೆ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಯೋಗ ತರಬೇತಿ ಹಾಗೂ ಕೊಡವ ಆಟ್‍ಪಾಟ್ ತರಬೇತಿಗಳನ್ನು ನೀಡಲಾಗುತ್ತಿದೆ. ಹುತ್ತರಿ ಹಬ್ಬದ ಸಂದರ್ಭ ತಾವಳಗೇರಿ ಮೂಂದ್‍ನಾಡ್‍ನಲ್ಲಿ ನಾಡ್‍ಕೋಲ್ ಆಚರಣೆಯ ಸಂದರ್ಭ ಕೊಡವ ಸಮಾಜದ ವತಿಯಿಂದ ವಿವಿಧ ರೀತಿಯ ಸಹಕಾರ ನೀಡಲಾಗುವದು. ಕೊಡವ ಸಮಾಜ ಹಾಗೂ ಜನಾಂಗದ ಅಭಿವೃದ್ಧಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.
ಉಪಾಧ್ಯಕ್ಷ ಚೊಟ್ಟೆಯಾಂಡಮಾಡ ಬೋಸು ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಖಜಾಂಜಿ ಚೊಟ್ಟೆಯಾಂಡಮಾಡ ವಿಶು ರಂಜಿ, ಕ್ರೀಡೆ ಹಾಗೂ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ್, ನಿರ್ದೇಶಕರಾದ ಮಾಣೀರ ವಿಜಯ ನಂಜಪ್ಪ, ತಡಿಯಂಗಡ ಕರುಂಬಯ್ಯ, ಚಂಗುಲಂಡ ಅಶ್ವಿನಿ ಸತೀಶ್, ಆಂಡಮಾಡ ಸತೀಶ್, ನಾಡ್‍ತಕ್ಕ ಕೈಬಿಲೀರ ಹರೀಶ್ ಅಪ್ಪಯ್ಯ, ಸಾಂಸ್ಕøತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಉಪಸ್ಥಿತರಿದ್ದರು.