ಗೋಣಿಕೊಪ್ಪಲು ನ. 30: ರೈತರು ಸೇರಿರುವುದು, ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟಿರುವುದು ಒಳ್ಳೆಯ ಬೆಳವಣಿಗೆ. ಜಿಲ್ಲಾಡಳಿತ ಸದಾ ರೈತರೊಂದಿಗೆ ಇರುತ್ತದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆ ಯಿತ್ತರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಅಧ್ಯಕ್ಷತೆಯಲ್ಲಿ ಬಾಳೆಲೆಯಲ್ಲಿ ಶುಕ್ರವಾರ ಆಯೋಜನೆಗೊಂಡಿದ್ದ ರೈತರ ಸಭೆಯಲ್ಲಿ ಅವರು ಮಾತ ನಾಡುತ್ತಿದ್ದರು. ಬೆಳಿಗ್ಗೆಯಿಂದಲೇ ನಡೆಯುತ್ತಿದ್ದ ಸಭೆಗೆ ಜಿಲ್ಲಾಧಿಕಾರಿಗಳು ಅಪರಾಹ್ನ ಆಗಮಿಸಿದ ನಂತರ ಮನು ಸೋಮಯ್ಯ ಸಭೆಯನ್ನು ಉದ್ದೇಶಿಸಿ ಮಾತನಾಡಿ ರೈತರು ಅನುಭವಿಸುತ್ತಿರುವ ತೊಂದರೆ, ಕಂದಾಯ ಇಲಾಖೆಯಲ್ಲಿ ಕಿರಿಯ ಅಧಿಕಾರಿಗಳು ಜನಸಾಮಾನ್ಯರೊಂದಿಗೆ ನಡೆದುಕೊಳ್ಳುತ್ತಿರುವ ರೀತಿ, ರೈತರ ಸಾಲ ಮನ್ನಾ ಗೊಂದಲದ ಬಗ್ಗೆ ರೈತ ಸಂಘ ಕಲೆಹಾಕಿದ್ದ ಸಮಗ್ರ ಮಾಹಿತಿಯನ್ನು ದಾಖಲೆ ಸಹಿತ ಜಿಲ್ಲಾಧಿಕಾರಿಗಳ ಮುಂದಿಟ್ಟು ಸಭೆಗೆ ಆಗಮಿಸಿದ್ದ ಜಿಲ್ಲೆಯ ವಿವಿಧ ಭಾಗದ ರೈತ ಮುಖಂಡರಿಂದ ಆಯಾಯ ಭಾಗದ ಸ್ಥಳೀಯ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿಡಲು ಅವಕಾಶ ಕಲ್ಪಿಸಿದರು.ಆಗ ತಮ್ಮ ಮನದಲ್ಲಿದ್ದ ನೋವುಗಳನ್ನು ಜಿಲ್ಲಾಧಿಕಾರಿಗಳ ಮುಂದಿಟ್ಟು ಸಮಸ್ಯೆ ಬಗೆ ಹರಿಸಲು ರೈತರು ಮನವಿ ಮಾಡಿದರು. ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಕಡತಗಳಿಗೆ ಇಂತಿಷ್ಟು ಹಣ ನಿಗದಿ ಮಾಡುತ್ತಿರುವದು ಗುಟ್ಟಾಗಿ ಉಳಿದಿಲ್ಲ. ಆರ್.ಟಿ.ಸಿ. ಮಾಡಿಸಲು ರೈತರು ಕಚೇರಿಗೆ ಅಲೆ ದಾಡುವ ಪರಿಸ್ಥಿತಿ ಇನ್ನೂ ಕಡಿಮೆ ಯಾಗಲಿಲ್ಲ. ಸರಕಾರದ ವತಿಯಿಂದ ರೈತರ ಸಾಲ ಮನ್ನಾ ವಿಚಾರದಲ್ಲಿ ಗೊಂದಲ ನಿವಾರಣೆಯಾಗಿಲ್ಲ.

(ಮೊದಲ ಪುಟದಿಂದ) ಚೆಸ್ಕಾಂಗೆ ರೈತರು ಹಣ ಸಂದಾಯ ಮಾಡುವಲ್ಲಿ ಉದ್ದೇಶ ಪೂರ್ವಕವಾಗಿ ವಿಳಂಬ ಮಾಡಿಲ್ಲ. ಅನವಶ್ಯಕ ಬಿಲ್‍ಗಳಿಂದ ರೈತರು ಸಂಕಷ್ಕಕ್ಕೆ ಸಿಲುಕಿದ್ದಾರೆ. ವರ್ಷಕ್ಕೆ ಒಂದು ತಿಂಗಳು ಮಾತ್ರ ಹೆಚ್.ಪಿ.ವಿದ್ಯುತ್ ಬಳಸುತ್ತೇವೆ. ಆದರೆ 12 ತಿಂಗಳಿಗೆ ಬಿಲ್ ಹಾಕುವದರಿಂದ ರೈತರ ವಿದ್ಯುತ್ ಬಿಲ್ ಅಧಿಕಗೊಳ್ಳುತ್ತಿದೆ. ಆರ್.ಟಿ.ಸಿ.ಯಲ್ಲಿ ಗೊಂದಲದ ಸಮಸ್ಯೆ ಹೇಳತೀರದ್ದಾಗಿದೆ. ಗ್ರಾ.ಪಂ.ಮಟ್ಟದಲ್ಲಿ ಕಂದಾಯ ಅದಾಲತ್ ನಡೆಯುವ ಬಗ್ಗೆ ಕ್ರಮಕೈಗೊಳ್ಳಬೇಕು. ಪೊನ್ನಂಪೇಟೆ ತಾಲೂಕಿಗೆ ತಕ್ಷಣ ತಹಶೀಲ್ದಾರ್ ನೇಮಕ ಮಾಡಬೇಕು. ಬಾಳೆಲೆಯಲ್ಲಿ ಆಧಾರ್ ಕೇಂದ್ರ ತೆಗೆಯಬೇಕು. ಮಾಜಿ ಯೋಧ ಎಂಬ ಕಾರಣದಿಂದ ಆತ್ಮಹತ್ಯೆ ಪರಿಹಾರ ಇನ್ನೂ ಕೈ ಸೇರಿಲ್ಲ, ಅದಾಯ ಪತ್ರದ ಗೊಂದಲ, ಗ್ರಾಮೀಣ ರಸ್ತೆ ಸರಿಪಡಿಸಬೇಕು. ಕಾಫಿ ಕುಯ್ಲಿಗೆ ಬಂದ ಸಂದರ್ಭ ಕಾರ್ಮಿಕರು ಜೀಪಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ವೇಳೆ ತಿತಿಮತಿ ಉಪಠಾಣೆಯ ಮುಂದೆ ತೊಂದರೆ ನೀಡುತ್ತಿದ್ದಾರೆ. ಕನಿಷ್ಟ ಮೂರು ತಿಂಗಳಿಗೆ ಕಾರ್ಮಿಕರನ್ನು ಕರೆ ತರಲು ನಿಯಮವನ್ನು ಸಡಿಲಗೊಳಿಸಿ ಕೊಡಬೇಕು.

ಭತ್ತ ಕೇಂದ್ರ ತೆರೆಯಬೇಕು, ಭತ್ತಕ್ಕೆ ಬೆಂಬಲ ಬೆಲೆ ಸಿಗಬೇಕು, ಬಡ ಕಾರ್ಮಿಕರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೀಮೆಎಣ್ಣೆ ವಿತರಿಸುವಂತಾಗಬೇಕು-ಇತ್ಯಾದಿ ವಿಷಯಗಳ ಬಗ್ಗೆ ಕರ್ತಮಾಡ ಸುಜು, ತಾಣಚ್ಚಿರ ಲೇಹರ್, ಅರುಣ್ ಮಾಚಯ್ಯ, ಅಳಮೇಂಗಡ ಬೋಸ್, ಪುಚ್ಚಿಮಾಡ ಲಾಲ ಪೂಣಚ್ಚ, ಪುಚ್ಚಿಮಾಡ ಅಶೋಕ್, ಕೃಷ್ಣ ಗಣಪತಿ, ಅರಮಣಮಾಡ ರಂಜನ್ ಚಂಗಪ್ಪ, ವಿನು ಚಂಗಪ್ಪ, ಅಡ್ಡೇಂಗಡ ಅರುಣ್, ಸೋªಅÉುಯಂಡ ಗಣೇಶ್, ಬಿ.ಎನ್.ಪ್ರಥ್ವಿ, ರಾಮಕೃಷ್ಣ, ಹೇಮಚಂದ್ರ, ಕೆ.ಕೆ.ವಿಶ್ವನಾಥ್ ಮುಂತಾದವರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದರು.ರೈತರ ಸಮಸ್ಯೆಗಳನ್ನು ಸಮಾಧಾನದಿಂದಲೇ ಆಲಿಸಿದ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅÀವರು ರಾತ್ರಿ 7 ಗಂಟೆಯಾದರೂ ರೈತರ ಪ್ರಶ್ನೆಗಳಿಗೆ ಉತ್ತರಿಸಿ ಪರಿಹಾರ ಕಲ್ಪಿಸಿದರು.ರೈತರ ಪ್ರತಿ ಪ್ರಶ್ನೆಗಳಿಗೆ ನೋಟ್ ಹಾಕಿಕೊಂಡ ಜಿಲ್ಲಾಧಿಕಾರಿ ಕಿರಿಯ ಅಧಿಕಾರಿಗಳ ಸಹಕಾರ ಪಡೆದು ರೈತರ ಸಮಸ್ಯೆಗಳಿಗೆ ಪರಿಹಾರ ಸೂತ್ರ ತಿಳಿಸಿದರು

ಕಂದಾಯ ಅಧಿಕಾರಿಗಳಿಂ ರೈತರಿಗೆ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎಂಬ ಆರೋಪವಿರುವದರಿಂದ ಪ್ರತಿ ತಿಂಗಳು ಕಂದಾಯ ಅಧಿಕಾರಿಗಳ ಸಭೆ ಕರೆಯಲು ಕ್ರಮ ಕೈಗೊಳ್ಳಲಾಗಿದೆ. ತಹಶೀಲ್ದಾರ್ ಸಮ್ಮುಖದಲ್ಲಿ ಹೋಬಳಿವಾರು ಅದಾಲತ್ ನಡೆಸಲು ಕ್ರಮ ಕೈಗೊಳ್ಳಲು ತೀರ್ಮಾನ ಮಾಡಲಾಗಿದೆ. ದ.ಕೊಡಗಿನ ವಿವಿಧ ಭಾಗದಲ್ಲಿ ಕಂದಾಯ ಅದಾಲತ್ ನಡೆಯಲಿದೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ತಾನೇ ಖುದ್ದಾಗಿ ಆದಾಲತ್‍ನಲ್ಲಿ ಭಾಗವಹಿಸಿ ರೈತರ ಸಮಸ್ಯೆ ಬಗೆಹರಿ ಸುವ ಪ್ರಯತ್ನ ಮಾಡುವದಾಗಿ ಜಿಲ್ಲಾಧಿಕಾರಿ ನುಡಿದರು.

ಬಾಳೆಲೆ, ಪೊನ್ನಂಪೇಟೆ ಮುಖ್ಯ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗು ವದು.ಈ ಬಗ್ಗೆ ಟೆಂಡರ್ ಕಾರ್ಯ ಮುಗಿದಿದೆ. ಇಲಾಖೆಯಲ್ಲಿ ಹಣದ ಕೊರತೆ ಇಲ್ಲ,ಬಾಳೆಲೆ, ಬಿರುನಾಣಿ ಯಲ್ಲಿ ಆಸ್ಪತ್ರೆಯ ಸಮಸ್ಯೆಗಳನ್ನು ನೀಗಿಸಲಾಗುವದು ಪರಿಹಾರ ಹಣ ಇನ್ನೂ ಕೆಲವು ರೈತರಿಗೆ ಬಾಕಿ ಇದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. 300 ರೈತರ ಆಧಾರ್ ಇನ್ನೂ ಹೊಂದಾಣಿಕೆ ಆಗಿಲ್ಲ. ಇವರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಪರಿಹಾರ ಹಣ ಜಮಾ ಮಾಡಲು ಪತ್ರ ವ್ಯವಹಾರ ನಡೆದಿದೆ. ಆದಷ್ಟು ಬೇಗನೇ ರೈತರ ಖಾತೆಗಳಿಗೆ ಜಮಾವಣೆಯಾಗಲಿದೆ. ಸ್ವಂತ ಕೆಲಸ ಕಾರ್ಯಕ್ಕೆ ಗದ್ದೆಗಳಲ್ಲಿ ಇರುವ ಮರಳನ್ನು ತೆಗೆಯಲು ಅನುಮತಿ ನೀಡುತ್ತೇವೆ.ಇದು ದುರುಪಯೋಗ ವಾಗದಂತೆ ಎಚ್ಚರವಹಿಸಿ ಬಳಕೆ ಮಾಡಿಕೊಳ್ಳಿ. ಇಲಾಖಾಧಿಕಾರಿಗಳು ನ್ಯಾಯಯುತವಾಗಿ ನಡೆಸುವ ಕೆಲಸಗಳಿಗೆ ಅನವಶ್ಯಕ ಅಡ್ಡಿ ಮಾಡದಿರಿ,ಬಾಳೆಲೆಯಲ್ಲಿ ಆಧಾರ್ ಕೇಂದ್ರಕ್ಕೆ ಅವಕಾಶ ಮಾಡಿಕೊಡ ಲಾಗುತ್ತದೆ. ಎಂದು ರೈತರ ಸಮಸ್ಯೆಗಳಿಗೆ ಡಿಸಿ ಎಳೆ ಎಳೆಯಾಗಿ ಉತ್ತರಿಸಿ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸಿದರು.

ವೇದಿಕೆಯಲ್ಲಿ ಎ.ಸಿ. ಜವರೇಗೌಡ, ಜಿ.ಪಂ.ಸಿಇಓ ಲಕ್ಷ್ಮಿಪ್ರಿಯ, ಸಿ.ಸಿ.ಎಫ್. ಹರಿಲಾಲ್, ಡಿ.ಎಫ್.ಓಗಳಾದ.ಮರಿಯಾ ಕ್ರಿಸ್ತರಾಜ್, ಪ್ರಭಾಕರನ್, ಕವಿಯಪ್ಪ, ಸಿ.ಸಿ.ಎಫ್. ನಾರಾಯಣ ಸ್ವಾಮಿ, ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚಿರ ಬೋಸ್, ಸುಜಯ್ ಬೋಪಯ್ಯ, ಪುಚ್ಚಿಮಾಡ ಸುಭಾಷ್ ಸುಬ್ಬಯ್ಯ, ಅಜ್ಜಮಾಡ ಚಂಗಪ್ಪ, ಇಟ್ಟಿರ ಸಬಿತ ಭೀಮಯ್ಯ, ಅಲೆಮಾಡ ಮಂಜುನಾಥ್, ಚಂಗುಲಂಡ ಸೂರಜ್,ಚಟ್ಟಂಗಡ ಕಂಬ ಕಾರ್ಯಪ್ಪ, ಭವಿಕುಮಾರ್, ಪುಚ್ಚಿಮಾಡ ರಾಯ್ ಮಾದಪ್ಪ,ಕಿರುಗೂರು ಅಶೋಕ್ ಉಪಸ್ಥಿತರಿದ್ದರು.

ಕ್ಷಮೆಯಾಚಿಸಿದ ಸಿಸಿಎಫ್

ಕಳೆದ ಎರಡು ತಿಂಗಳ ಹಿಂದೆ ಪೊನ್ನಪ್ಪಸಂತೆ ಗ್ರಾ.ಪಂ.ವ್ಯಾಪ್ತಿಯ ರೈತರೊಬ್ಬರ ಕಾಡು ಹಂದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಕೆಲವು ಕಿರಿಯ ಅಧಿಕಾರಿಗಳು ರೈತ ಕುಟುಂಬದೊಂದಿಗೆ ನಡೆದುಕೊಂಡ ರೀತಿಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಲಾಗುವದು.ಸಿಬ್ಬಂದಿಗಳ ಮೇಲೆ ಅಗತ್ಯ ಕ್ರಮ ಕೈಗೊಳ್ಳಲಾಗುವದು ಎಂದು ಆಗಿದ್ದÀ ಪ್ರಮಾದಕ್ಕೆ ಅಧಿಕಾರಿಗಳ ಪರವಾಗಿ ನಾನೇ ಕ್ಷಮೆಯಾಚಿಸುತ್ತೇನೆ. ಈ ಪ್ರಕರಣಕ್ಕೆ ತೆರೆ ಎಳೆಯೋಣ ಎಂದು ಮೈಸೂರು, ಕೊಡಗು ಸಿಸಿಎಫ್ ಹರಿಲಾಲ್ ರೈತರ ಮುಂದೆ ಕ್ಷಮೆಯಾಚಿಸುವ ಮೂಲಕ ಈ ಪ್ರಕರಣಕ್ಕೆ ಇತಿಶ್ರೀ ಹಾಡಲಾಯಿತು.

-ಚಿತ್ರ ವರದಿ,ಹೆಚ್.ಕೆ.ಜಗದೀಶ್