ಮಡಿಕೇರಿ, ನ. 30: ಕೊಡಗು ಜಿಲ್ಲಾ ಪೊಲೀಸ್ ಶಸಸ್ತ್ರದಳ ಘಟಕಕ್ಕೆ ಸಿಬ್ಬಂದಿಗಳ ನೇಮಕಾತಿ ಸಂಬಂಧ ಡಿ. 1 ರಂದು (ಇಂದು) ಲಿಖಿತ ಪರೀಕ್ಷೆ ನಡೆಯಲಿದೆ. ಈಗಾಗಲೇ ಅರ್ಜಿಯೊಂದಿಗೆ ಹೆಸರು ನೋಂದಾ ಯಿಸಿಕೊಂಡಿರುವ ಅಭ್ಯರ್ಥಿಗಳು, ಕುಶಾಲನಗರ ಹಾಗೂ ಮಡಿಕೇರಿಯ ಪರೀಕ್ಷಾ ಕೇಂದ್ರಗಳಲ್ಲಿ ಸಮಯಕ್ಕೆ ಸರಿಯಾಗಿ ಹಾಜರಿರಬೇಕೆಂದು ಕೊಡಗು ಜಿಲ್ಲಾ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಸಲಹೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಶಸಸ್ತ್ರಪಡೆಗೆ ನೇಮಕಾತಿ ಸಂಬಂಧ 3630 ಮಂದಿ ಲಿಖಿತ ಪರೀಕ್ಷೆಗೆ ಅರ್ಜಿ ಸಲ್ಲಿಸಿ ಹೆಸರು ನೋಂದಾಯಿಸಿಕೊಂಡಿದ್ದಾರೆ.