ಶ್ರೀಮಂಗಲ, ನ. 30: ವರ್ಷಂಪ್ರತಿ ನಡೆಸುವಂತೆ ಈ ವರ್ಷವು ಹರಿಹರ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ತಾ. 2 ಹಾಗೂ 3 ರಂದು ಷಷ್ಠಿಯ ಪ್ರಯುಕ್ತ ತಲೆಮುಡಿ, ತುಲಾಭಾರ ಸೇರಿದಂತೆ ವಿವಿಧ ಹರಕೆ ಒಪ್ಪಿಸುವದು, ರುದ್ರಾಭಿಷೇಕ, ಕುಂಕುಮಾರ್ಚನೆ, ಮಹಾಪೂಜೆ ಹಾಗೂ ಇತರ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿವೆ. 2 ದಿನಗಳ ಕಾಲ ಭಕ್ತಾದಿಗಳಿಗೆ ಅನ್ನದಾನವಿರುತ್ತದೆ. 2 ರಂದು ನೆರ್‍ಪು, 3 ರಂದು ಸಂಜೆ 5 ಗಂಟೆಗೆ ದೇವರ ದರ್ಶನ, 6:30 ಗಂಟೆಗೆ ಅವಭೃತ ಸ್ನಾನ, 8 ಗಂಟೆಗೆ ದೇವರ ನೃತ್ಯ ಹಾಗೂ ವಸಂತ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಹಾಗೂ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.