ಮಡಿಕೇರಿ, ನ. 30: ಮಡಿಕೇರಿ ತಾಲೂಕು ಕಡಗದಾಳು ಗ್ರಾಮದ ಪ್ರಕೃತಿದತ್ತವಾದ ಶ್ರೀ ಬೊಟ್ಲಪ್ಪೇಶ್ವರ ದೇವಾಲಯದಲ್ಲಿ ಶ್ರೀ ಬೊಟ್ಲಪ್ಪ ಯುವ ಸಂಘ ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ತಾ. 1 ರಂದು ಕಿರುಪೂಜೆ ನಡೆಯಲಿದೆ. ಅಂದು ಬೆಳಿಗ್ಗೆ 9.30 ಗಂಟೆಯಿಂದ ಪೂಜಾ ಕೈಂಕರ್ಯಗಳು ಆರಂಭಗೊಂಡು ಮಧ್ಯಾಹ್ನ ಅನ್ನದಾನ ನಡೆಯಲಿದೆ.