ಸಂಪಾಜೆ, ನ. 30: ಭಾರತ ಸರ್ಕಾರ, ನೆಹರೂ ಯುವ ಕೇಂದ್ರ ಮಡಿಕೇರಿ, ನೇತಾಜಿ ಗೆಳೆಯರ ಬಳಗ ಚೆಡಾವು ಸಂಪಾಜೆ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ ಸಂಪಾಜೆ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಅನಂತೇಶ್ವರ ಎನ್.ಸಿ. ಅಧ್ಯಕ್ಷರು ಪಯಶ್ವಿನಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಸಂಪಾಜೆ ಇವರು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೆ.ಕೆ. ದೇವಪ್ಪ, ಎ.ಪಿ.ಎಂ.ಸಿ. ಸದಸ್ಯರು ಮಡಿಕೇರಿ, ಕೃಷ್ಣಪ್ಪ ಪಡ್ಪು, ನಿವೃತ್ತ ಅಧಿಕಾರಿ ಪೊಲೀಸ್ ಇಲಾಖೆ, ಪಿ.ಕೆ. ಇಸ್ಮಾಯಿಲ್, ಚೇತನ್ ಶಿಕ್ಷಕರಾದ ದಯಾನಂದ, ಚರಣ್ ಬಿ.ಜೆ. ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಶಶಿಕುಮಾರ್ ಹೆಚ್.ಬಿ., ಅಧ್ಯಕ್ಷರು ನೇತಾಜಿ ಗೆಳೆಯರ ಬಳಗ ಚೆಡಾವು ವಹಿಸಿದ್ದರು. ಸರೋಜ ಸುಂದರ ಸ್ವಾಗತಿಸಿ, ಸುಮಿತ್ರಾ ಪಿ.ಆರ್. ವಂದಿಸಿ, ಸಂತೋಷ್ ಕುಮಾರ್ ಹೆಚ್.ಬಿ. ನಿರೂಪಿಸಿದರು.
ಸಂಜೆ ಸಮಾರೋಪ ಸಮಾರಂಭದಲ್ಲಿ ವಾಸು ಕೊಯನಾಡು, ನಿವೃತ್ತ ಅಧಿಕಾರಿ ತೆರಿಗೆ ಇಲಾಖೆ ಇವರು ಪ್ರಶಸ್ತಿ ವಿತರಿಸಿದರು. ಮುಖ್ಯ ಅತಿಥಿಗಳಾಗಿ ಕುಮಾರ್ ಚೆದ್ಕಾರ್, ಅಧ್ಯಕ್ಷರು ಗ್ರಾಮ ಪಂಚಾಯಿತಿ ಸಂಪಾಜೆ, ಮೋಯ್ದಿನ್ ಕುಂಞÂ, ಮಾಜಿ ಸದಸ್ಯರು, ಜಿಲ್ಲಾ ಪಂಚಾಯಿತಿ ಕೊಡಗು, ಉಮೇಶ್ ನಿಡುಬೆ, ಮಿಥುನ್ ಎಂ.ಬಿ. ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಿ.ಎಲ್. ಸುರೇಶ್ ಸ್ಥಾಪಕಾಧ್ಯಕ್ಷರು ನೆ.ಗೆ.ಬ. ಚೆಡಾವು ಇವರು ವಹಿಸಿದ್ದರು. ಸೆಲೆಸ್ಟಿನಾ ಲೋಬೊ, ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು ಇವರನ್ನು ಶಾಂತಕುಮಾರಿ ಸನ್ಮಾನಿಸಿದರು.