ಗೋಣಿಕೊಪ್ಪ ವರದಿ, ನ. 30: ಪರಿಸರ ಅಸಮತೋಲನ ತಡೆಯುವಲ್ಲಿ ಯುವಜನತೆ ಪಾತ್ರ ಹೆಚ್ಚಿದೆ ಎಂದು ಕೊಡಗು ಮಾಡೆಲ್ ಫಾರೆಸ್ಟ್ ಟ್ರಸ್ಟಿ ಚೆಪ್ಪುಡೀರ ಶರಿ ಸುಬ್ಬಯ್ಯ ಅಭಿಪ್ರಾಯಪಟ್ಟರು.
ಹಳ್ಳಿಗಟ್ಟು ಕೂರ್ಗ್ ಇನ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಆಕ್ಟಿವಿಟ ಕ್ಲಬ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿ, ಯುವ ಜನತೆ ಹೆಚ್ಚಾಗಿ ಪರಿಸರ ರಕ್ಷಣೆಯತ್ತ ಕೇಂದ್ರೀಕೃತಗೊಳ್ಳಬೇಕಿದೆ ಎಂದು ಹೇಳಿದರು.
ಜಸ್ಟ್ ರೋಬೊಟೀಸ್ ಸಂಸ್ಥೆ ಸಿಇಒ ಬ್ರಿಜೇಶ್ ಮಾತನಾಡಿ, ತಂತ್ರಜ್ಞಾನದಿಂದಾಗುತ್ತಿರುವ ಅನೈರ್ಮಲ್ಯವನ್ನು ನಿಯಂತ್ರಿಸಲು ವಿದ್ಯಾರ್ಥಿಗಳು ಯೋಜನೆ ರೂಪಿಸಿಕೊಳ್ಳಬೇಕಿದೆ ಎಂದರು. ಕಾರ್ಯಕ್ರಮವನ್ನು ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಪಿ. ಬೆಳ್ಯಪ್ಪ ಉದ್ಘಾಟಿಸಿ ಮಾತನಾಡಿದರು. ಸೊಸೈಟಿ ನಿರ್ದೇಶಕ ಡಾ. ಎಂ.ಸಿ. ಕಾರ್ಯಪ್ಪ, ಕಾರ್ಯದರ್ಶಿ ರಾಕೇಶ್ ಪೂವಯ್ಯ, ಪ್ರಾಂಶುಪಾಲೆ ಡಾ. ಪಿ.ಸಿ. ಕವಿತಾ, ಪಿಯು ಪ್ರಾಂಶುಪಾಲೆ ಡಾ. ಸಣ್ಣುವಂಡ ರೋಹಿಣಿ ತಿಮ್ಮಯ್ಯ ಇದ್ದರು. ಚರಿಷ್ಮಾ ಸ್ವಾಗತಿಸಿದರು.