ಮಡಿಕೇರಿ, ನ. 30: ನಗರದ ಪೆನ್‍ಷನ್ ಲೇನ್‍ನಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದ ಕಾರ್ಮಿಕ ಆರ್. ಬಾಲು (28) ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಮಿಕ ಸಾವಿಗೆ ಕಾರಣ ತಿಳಿದು ಬಂದಿಲ್ಲವೆಂದು ಪೊಲೀಸರು ತಿಳಿಸಿದ್ದು, ಕಾನೂನು ಕ್ರಮ ಕೈಗೊಂಡಿದ್ದಾರೆ. ಮೃತ ಬಾಲು ತನ್ನ ತಾಯಿಯೊಂದಿಗೆ ವಾಸವಿದ್ದು, ಅವಿವಾಹಿತನಾಗಿದ್ದ ಮೃತ ಬಾಲು ಬೇರೆ ಬೇರೆ ಕಡೆ ಕಾರ್ಮಿಕರಾಗಿ ದುಡಿಯುತ್ತಿದ್ದರೆಂದು ಗೊತ್ತಾಗಿದೆ.
-ಟಿ.ಜಿ.ಎಸ್.