ಮಡಿಕೇರಿ, ನ. 30: ಕರ್ನಾಟಕ ಪ್ರದೇಶ ಹೊಟೇಲ್ ಮತ್ತು ರೆಸ್ಟೋರೆಂಟ್ ಸಂಸ್ಥೆಯ ವತಿಯಿಂದ ಹೊಟೇಲ್ ಉದ್ಯಮದಲ್ಲಿನ ಸೇವೆಗಾಗಿ ನೀಡಲಾಗುವ ಆತಿಥ್ಯ ರತ್ನ ಪ್ರಶಸ್ತಿಗೆ ಕುಶಾಲನಗರದ ಹೊಟೇಲ್ ಉದ್ಯಮಿ ಭಾಸ್ಕರ್ ಕೆ.ಕೆ. ಅವರನ್ನು ಆಯ್ಕೆ ಮಾಡಲಾಗಿದೆ. ಡಿ. 15 ರಂದು ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ನೀಡಲಾಗುವದು ಎಂದು ಸಂಘದ ಪ್ರಕಟಣೆ ತಿಳಿಸಿದೆ.