ಮಾಚಂಗಡ ಸುಜಾ ಪೂಣಚ್ಚ

*ಗೋಣಿಕೊಪ್ಪಲು, ನ. 30: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಸಕ್ರಿಯ ಪ್ರಯತ್ನ ನಡೆಸುವದಾಗಿ ಗೋಣಿಕೊಪ್ಪಲು ಎಪಿಎಂಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಮಾಚಂಗಡ ಸುಜಾ ಪೂಣಚ್ಚ ಅವರು ಭರವಸೆ ನೀಡಿದರು.

ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಾತನಾಡಿದ ಅವರು, ರೈತಪರ ಚಟುವಟಿಕೆಗಳ ಮೂಲಕ ಅಭಿವೃದ್ಧಿ ಕಾರ್ಯಗಳು ಹಾಗೂ ಅಗತ್ಯತೆಗಳನ್ನು ಸಮರ್ಪಕವಾಗಿ ನಿಭಾಯಿಸುವದಾಗಿ ಹೇಳಿದರು.

ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ತಮ್ಮ ಅಧ್ಯಕ್ಷ ಅವಧಿಯನ್ನು ಬಳಸಿಕೊಂಡು ನ್ಯಾಯ ಒದಗಿಸಿಕೊಡುವದಾಗಿಯೂ ಅವರು ಈ ಸಂದರ್ಭ ನುಡಿದರು.

ಜಿಲ್ಲಾ ಬಿಜೆಪಿ ವರ್ತಕ ಪ್ರಕೋಷ್ಟ ಅಧ್ಯಕ್ಷ ಕಾಡ್ಯಮಾಡ ಗಿರೀಶ್ ಗಣಪತಿ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪಟ್ರಪಂಡ ರಘು ನಾಣಯ್ಯ, ತಾಲೂಕು ಬಿಜೆಪಿ ಮಂಡಳ ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾರ್ಯದರ್ಶಿ ಲಾಲಾ ಭೀಮಯ್ಯ, ಕುಂಬೆಯಂಡ ಗಣೇಶ್, ತಾಲೂಕು ವರ್ತಕರ ಪ್ರಕೋಷ್ಟ ಅಧ್ಯಕ್ಷ ಚೆಪ್ಪುಡೀರ ಮಾಚಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷ ನೆಲ್ಲೀರ ಚಲನ್, ಆರ್.ಎಂ.ಸಿ. ಉಪಾಧ್ಯಕ್ಷ ಚಿಯಕ್‍ಪೂವಂಡ ಸುಬ್ರಮಣಿ, ಸದಸ್ಯರುಗಳಾದ ಗುಮ್ಮಟೀರ ಕಿಲನ್ ಗಣಪತಿ, ಅಜ್ಜಿಕುಟ್ಟೀರ ಮುತ್ತಪ್ಪ, ಹೆಚ್.ಎನ್. ಮೋಹನ್‍ರಾಜ್, ಕಳ್ಳಂಗಡ ಬಾಲಕೃಷ್ಣ, ಮಾಚಿಮಂಡ ಸುವೀನ್ ಗಣಪತಿ, ಜಿಲ್ಲಂಡ ಕೆ.ಅಯ್ಯಪ್ಪ, ಕೊಟ್ಟುಕುಟ್ಟಡ ಭೀಮಣಿ, ಕಾರ್ಯದರ್ಶಿ ಶ್ರೀಧರ್, ಪ್ರಮುಖರಾದ ಕಟ್ಟೆರ ಈಶ್ವರ, ತೀತಿರ ಊರ್ಮಿಳ, ಮಾಚಿಮಾಡ ಭರತ್, ಸೇರಿದಂತೆ ಹಲವರು ಹಾಜರಿದ್ದರು.

-ಎನ್.ಎನ್. ದಿನೇಶ್