ಸಿದ್ದಾಪುರ, ನ. 30: ಸಂತ್ರಸ್ತ ಕುಟುಂಬಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಅರೆಕಾಡು ಗ್ರಾಮದಲ್ಲಿ ಒತ್ತುವರಿ ಭೂಮಿಯನ್ನು ತೆರವುಗೊಳಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ. ಅರೆಕಾಡು ಗ್ರಾಮದ ಅಭ್ಯತ್‍ಮಂಗಲ ಗ್ರಾಮಕ್ಕೆ ಸೇರಿರುವ ಸರ್ವೆ ನಂ. 87/2 ರಲ್ಲಿ ಒತ್ತುವರಿ ಯಾಗಿದ್ದ ಸರ್ಕಾರಿ ಭೂಮಿಯನ್ನು ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಹಾಗೂ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಈ ಬಾರಿಯ ಪ್ರವಾಹದಿಂದಾಗಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ನದಿ ತೀರದ ನೂರಾರು ಮನೆಗಳು ಹಾನಿಯಾಗಿದ್ದವು. ಅಲ್ಲದೇ ನೂರಾರು ಮನೆಗಳು ಸಂಪೂರ್ಣವಾಗಿ ನೆಲಸಮ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜವರೇಗೌಡ ಹಾಗೂ ಸೋಮವಾರ ಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
ಈ ಬಾರಿಯ ಪ್ರವಾಹದಿಂದಾಗಿ ನೆಲ್ಯಹುದಿಕೇರಿ ಹಾಗೂ ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಗೆ ಒಳಪಡುವ ನದಿ ತೀರದ ನೂರಾರು ಮನೆಗಳು ಹಾನಿಯಾಗಿದ್ದವು. ಅಲ್ಲದೇ ನೂರಾರು ಮನೆಗಳು ಸಂಪೂರ್ಣವಾಗಿ ನೆಲಸಮ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಡೆಸಲಾಗಿತ್ತು. ಇದರಿಂದಾಗಿ ಜಿಲ್ಲಾಡಳಿತವು ನೆಲ್ಯಹುದಿಕೇರಿಯ ಗ್ರಾಮದ ಬೆಟ್ಟದಕಾಡುವಿನಲ್ಲಿ ಕಂದಾಯ ಇಲಾಖೆಯ ಮೂಲಕ ಒತ್ತುವರಿ ಜಾಗವನ್ನು ಗುರುತಿಸಿ ಗಡಿ ಭಾಗವನ್ನು ಗುರುತಿಸಲಾಗಿತ್ತು. ಈತನ್ಮಧ್ಯೆ ಬೆಟ್ಟದಕಾಡುವಿನ ಕಾಫಿ ತೋಟದ ಮಾಲೀಕರು ಉಚ್ಚ ನ್ಯಾಯಾಲಯದ ಮುಖಾಂತರ ತಾತ್ಕಾಲಿಕ ತಡೆಯಾಜ್ಞೆಯನ್ನು ತಂದಿದ್ದರು. ಈ ಬಗ್ಗೆ ಜಿಲ್ಲಾಡಳಿತದ ವತಿಯಿಂದ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ತಡೆಯಾಜ್ಞೆ ತೆರವಿಗೆ ತ್ವರಿತ ಗತಿಯಲ್ಲಿ ಪ್ರಯತ್ನಿಸಿತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಮರು ಸರ್ವೆ ಮಾಡುವಂತೆ ಆದೇಶ ನೀಡಿದ ಮೇರೆಗೆ ಬುಧವಾರದಂದು ಬೆಂಗಳೂರಿನ ಜೆ.ಡಿ.ಎಲ್.ಆರ್. ಭವಾನಿ ಹಾಗೂ ಜಿಲ್ಲಾ ಡಿ.ಡಿ.ಎಲ್. ಆರ್. ಶ್ರೀನಿವಾಸ ಅವರ ನೇತೃತ್ವದಲ್ಲಿ ಬೆಟ್ಟದಕಾಡುವಿನಲ್ಲಿ ಮರು ಸರ್ವೆ ನಡೆಸಲಾಯಿತು. ಇದಲ್ಲದೆ ಅರೆಕಾಡುವಿನ ಗ್ರಾಮದ ಅಭ್ಯತ್‍ಮಂಗಲ ಗ್ರಾಮಕ್ಕೆ ಸೇರಿರುವ ಕುಂಜ್ಞಿ ಮಹಮ್ಮದ್ ಎಂಬವರ ಸರ್ವೆ ನಂ. 87/2 ರಲ್ಲಿ ಒತ್ತುವರಿಯಾಗಿದ್ದ 6.37 ಏಕರೆ ಜಾಗವನ್ನು ಈ ಹಿಂದೆ ಜಿಲ್ಲಾಡಳಿತದ ವತಿಯಿಂದ ಗುರುತಿಸಿ ಸರ್ವೆ ಕಾರ್ಯವನ್ನು ಮುಕ್ತಾಯ ಗೊಳಿಸಲಾಗಿತ್ತು. ಆದರೆ ತೋಟದ ಮಾಲೀಕರು ನ್ಯಾಯಾಲಯದಿಂದ ತಾತ್ಕಾಲಿಕ (ಮೊದಲ ಪುಟದಿಂದ) ತಡೆಯಾಜ್ಞೆಯನ್ನು ತಂದಿದ್ದರು. ಇದರ ವಿರುದ್ಧ ಜಿಲ್ಲಾಡಳಿತವು ಭೂ ಕಬಳಿಕೆಯ ನ್ಯಾಯಮಂಡಳಿ ಹಾಗೂ ಉಚ್ಚ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕುಂಜ್ಞಿ ಮಹಮ್ಮದ್ ಅವರ ಮೇಲ್ಮನವಿ ನ್ಯಾಯಾಲಯದಲ್ಲಿ ವಜಾಗೊಂಡಿತ್ತು ಎನ್ನಲಾಗಿದೆ. ಇದರಿಂದಾಗಿ ಜಿಲ್ಲಾಡಳಿತವು ಶನಿವಾರದಂದು ಒತ್ತುವರಿ ಭೂಮಿಯನ್ನು ತೆರವುಗೊಳಿಸಲು ಮುಂದಾಯಿತು.
ಜಿಲ್ಲಾಡಳಿತವು ಅವಿರತ ಪ್ರಯತ್ನದಿಂದಾಗಿ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆಯಲು ಯಶಸ್ವಿಯಾಗಿದೆ. ಈ ಬಗ್ಗೆ ಮಾತನಾಡಿದ ತೆರವು ಕಾರ್ಯಾ ಚರಣೆಯ ನೇತೃತ್ವ ವಹಿಸಿರುವ ಉಪ ವಿಭಾಗಾಧಿಕಾರಿ ಜವರೇಗೌಡ ಅಭ್ಯತ್ ಮಂಗಲ ಗ್ರಾಮಕ್ಕೆ ಸೇರಿರುವ ಅರೆಕಾಡು ಗ್ರಾಮದಲ್ಲಿರುವ ಸರ್ವೆ ನಂ. 87/2ರಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಭೂಮಿ 6.37 ಏಕರೆ ಜಾಗವನ್ನು ಜಿಲ್ಲಾಡಳಿತ ವಶಕ್ಕೆ ತೆಗೆದುಕೊಂಡು ಸಂತ್ರಸ್ತರಿಗೆ ಶಾಶ್ವತ ಸೂರು ಒದಗಿಸಿ ಕೊಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಅಲ್ಲದೇ ಅಭ್ಯತ್ ಮಂಗಲ ಗ್ರಾಮದ ಸರ್ವೆ ನಂ. 87/2 ಜಾಗದ ಮಾಲೀಕರು ಈ ಹಿಂದೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಅಲ್ಲದೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಇದರ ವಿರುದ್ಧ ಜಿಲ್ಲಾಡಳಿತದ ವತಿಯಿಂದ ಅಗತ್ಯ ದಾಖಲೆಗಳನ್ನು ನೀಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕುಂಜ್ಞಿ ಮಹಮ್ಮದ್ ಅವರ ಮೇಲ್ಮನವಿ ವಜಾಗೊಂಡಿ ರುತ್ತದೆ ಎಂದರು.
ತ್ವರಿತ ಗತಿಯಲ್ಲಿ ಒತ್ತುವರಿ ಭೂಮಿಯನ್ನು ತೆರವುಗೊಳಿಸಿ ಅಲ್ಲಿರುವ ಮರಗಳ ಪಟ್ಟಿಯನ್ನು ತಯಾರಿಸಲು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು. ತೆರವು ಆದ ಕೂಡಲೇ ಅದೇ ಜಾಗದಲ್ಲಿ ಸಂತ್ರಸ್ತರಿಗೆ ಬಾಡಿಗೆ ರೂಪದಲ್ಲಿ ಎರಡು ಕಂತಿನಲ್ಲಿ ರೂ.25 ಸಾವಿರದಂತೆ ಒಟ್ಟು ರೂ. 50 ಸಾವಿರ ನೀಡಿ ತಾತ್ಕಾಲಿಕ ಶೆಡ್ಡು ನಿರ್ಮಿಸಲು ಅವಕಾಶ ಕಲ್ಪಿಸಲಾಗುವುದು. ಇದೇ ಜಾಗದ ಬಳಿ ಇರುವ ಖಾಸಗಿ ಕಂಪೆನಿಗೆ ಸೇರಿದ ಕಾಫಿ ತೋಟದ ಒಳಗೆ ಇರುವ 87/4ರಲ್ಲಿ 1.33 ಏಕರೆ ಒತ್ತುವರಿ ಜಾಗವನ್ನು ಕೂಡ ವಶಕ್ಕೆ ಪಡೆದುಕೊಳ್ಳಲಾಗಿದ್ದು ಇದನ್ನು ಕೂಡ ತೆರವುಗೊಳಿಸಿ ವಶಕ್ಕೆ ಪಡೆದುಕೊಳ್ಳ ಲಾಗಿದೆ ಎಂದು ಉಪ ವಿಭಾಗಾದಿ üಕಾರಿ ಜವರೇಗೌಡ ತಿಳಿಸಿದರು. ನೆಲ್ಯಹುದಿಕೇರಿಯ ಬೆಟ್ಟದಕಾಡುವಿನಲ್ಲಿ ಈ ಹಿಂದೆ ಜಿಲ್ಲಾಡಳಿತ ಗುರುತಿಸಿದ್ದ ಒತ್ತುವರಿ ಜಾಗದ ಮಾಲೀಕರು ನ್ಯಾಯಾಲಯ ದಿಂದ ತಡೆಯಾಜ್ಞೆ ತಂದಿದ್ದ ಬಗ್ಗೆ ಜಿಲ್ಲಾಡಳಿತವು ನ್ಯಾಯಾಲಯಕ್ಕೆ ಅಗತ್ಯ ದಾಖಲೆ ಸಲ್ಲಿಸಿದ್ದ ಸಂದರ್ಭ ಎರಡು ನಕಾಶೆಗಳಲ್ಲಿ ಗೊಂದಲ ಏರ್ಪಟ್ಟಿತು.
ಈ ಹಿನ್ನೆಲೆಯಲ್ಲಿ ಇದೀಗ ನ್ಯಾಯಾಲಯಕ್ಕೆ ವಾಸ್ತವಾಂಶ ತಿಳಿಸಿದ್ದು, ನ್ಯಾಯಾಲಯದಿಂದ ಮರು ಸರ್ವೆ ಮಾಡುವಂತೆ ತಿಳಿಸಿದ ಮೇರೆಗೆ ಇದೀಗ ಮತ್ತೊಮ್ಮೆ ಒತ್ತುವರಿ ಜಾಗದಲ್ಲಿ ಸರ್ವೆ ಕಾರ್ಯ ನಡೆಸಲಾಗುತ್ತಿದೆ ಎಂದರು. ಒತ್ತುವರಿ ಭೂಮಿ ಕಾರ್ಯಾಚರಣೆ ಸಂದರ್ಭ ದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ ರಾಜ್ ತಾಲೂಕು ಕಾರ್ಯ ನಿರ್ವಹಣಾ ಧಿಕಾರಿ ಸುನಿಲ್ ಕುಮಾರ್, ಕಂದಾಯ ಪರಿವೀಕ್ಷಕರಾದ ಮಧು ಸೂದನ್, ವಿನು, ಗ್ರಾಮಲೆಕ್ಕಿಗ ಸಂತೋಷ್, ಚೇತನ್, ಉಪ ವಲಯಾರಣ್ಯಾಧಿಕಾರಿ ಸುಬ್ರಾಯ ಪಿಡಿಓ ಅನಿಲ್ ಕುಮಾರ್, ಗ್ರಾ.ಪಂ. ಉಪಾಧ್ಯಕ್ಷೆ ಸಫಿಯಾ, ಗ್ರಾ.ಪಂ ಸದಸ್ಯರುಗಳಾದ ಸಾಬು ವರ್ಗೀಸ್, ಸುಕೂರ್, ಅಫ್ಸಲ್ ಇತರರು ಹಾಜರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.