ಮಡಿಕೇರಿ, ನ. 30: ಗರ್ವಾಲೆಯಿಂದ ಕೊಡಗಿನ ಗಡಿಯಲ್ಲಿರುವ ಮಲ್ಲಿಪಟ್ಟಣಕ್ಕೆ ಹತ್ಯೆಗೈಯ್ಯುವ ಸಲುವಾಗಿ ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ದನಗಳನ್ನು ಪೊಲೀಸರು ವಶಕ್ಕೆ ಪಡೆದು; ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ವಾಹನವೊಂದರಲ್ಲಿ (ಕೆ.ಎ. 13. ಸಿ. 4001) ದನಗಳನ್ನು ಸಾಗಿಸುತ್ತಿದ್ದ ವೇಳೆ; ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಸಿಬ್ಬಂದಿ ವಶಕ್ಕೆ ಪಡೆದು; ಆರೋಪಿಗಳಾದ ಎಂ. ಮೂಸಾ ಹಾಗೂ ಸಿದ್ಧಿಕ್‍ರನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.